ದೆಹಲಿ : ಇದು ದಿಲ್ಲಿ ಡೆಡ್ಲಿ ಮರ್ಡರ್ನ ರಣರೋಚಕ ಸತ್ಯವಾಗಿದ್ದು, ಪ್ರೀತಿಯನ್ನ ಪೀಸ್.. ಪೀಸ್ ಮಾಡಿದಾತನ ಭಯಾನಕ ಹಿಸ್ಟ್ರಿಯಿದೆ. ಪ್ರೀತಿಯನ್ನೇ ಕೊಂದ ಕೊಲೆಗಾರನ ಹಿನ್ನೆಲೆ ಏನ್ ಗೊತ್ತಾ? ಪೊಲೀಸರ ಮುಂದೆ ನರರಾಕ್ಷಸ ಬಾಯ್ಬಿಟ್ಟ ಸತ್ಯವೇನು..? ಕಿಲ್ಲರ್ ಅಫ್ತಾಬ್ ಹೇಳಿದ ಸತ್ಯ ಕೇಳಿ ಪೊಲೀಸರೇ ಶಾಕ್ ಆಗಿದ್ದು, ಶ್ರದ್ಧಾಳಿಗೆ ಶ್ರಾದ್ಧ ಮಾಡಿದಾತ ಹೇಳಿದ್ದೇನು ಗೊತ್ತಾ..? ಈ ಸ್ಟೋರಿ ಓದಿ…
ಶ್ರದ್ಧಾಳನ್ನ ಕೊಲ್ಲಲು ಮೊದಲೇ ಮಾಸ್ಟರ್ ಪ್ಲಾನ್ ಮಾಡಿದ್ದು, ಕೊಲ್ಲಲು ಅಮೆರಿಕಾ ಡೆಕ್ಸ್ಸ್ಟರ್ ಟಿವಿ ಶೋ ನೋಡ್ತಿದ್ದ,
ಹತ್ಯೆ ಮಾಡಿ ದೇಹ ಛಿದ್ರಿಸಲು ಕಸಾಯಿಖಾನೆಯಲ್ಲಿ ಟ್ರೈನಿಂಗ್ ಪಡೆದಿದ್ದನು. ಮಾಂಸ ಕೊಚ್ಚಲು ಹಲವು ದಿನಗಳ ಕಾಲ ಟ್ರೈನಿಂಗ್ ತಗೊಂಡಿದ್ಧಾನೆ. ಕಸಾಯಿಖಾನೆ ರೀತಿಯಲ್ಲೇ ಶ್ರದ್ಧಾಳ ದೇಹ ತುಂಡು ಮಾಡಿದ್ದ, ಮಾಂಸ ತುಂಬಿಡಲು 300 ಲೀ. ಫ್ರಿಡ್ಜ್ ಖರೀದಿಸಿದ್ದ. ಶ್ರದ್ಧಾಳ ದೇಹದ ಚೂರನ್ನ ಫ್ರಿಡ್ಜ್ನಲ್ಲಿ ತುಂಬಿದ್ದನು. ರಕ್ತದ ಕಲೆಗಳು ಗೊತ್ತಾಗದಂತೆ ಮನೆಯನ್ನ ಆ್ಯಸಿಡ್ನಲ್ಲಿ ಒರೆಸಿದ್ದ, ಮಾಂಸದ ವಾಸನೆ ಬಾರದಂತೆ ಮನೆಗೆ ಪರ್ಫ್ಯೂಮ್ ಒಡೆದಿದ್ದ, ರಕ್ತದ ಕಲೆಗಳ ಬಟ್ಟೆಗಳನ್ನ ಗಾರ್ಬೆಜ್ ವಾಹನಕ್ಕೆ ಎಸೆದಿದ್ದನು. 18 ದಿನ ಯಾರಿಗೂ ಗೊತ್ತಾಗದಂತೆ ಮಾಂಸವನ್ನ ಕಾಡಿಗೆ ಎಸೆಯುತ್ತಿದ್ದ, ಮಧ್ಯರಾತ್ರಿ 2 ಗಂಟೆಗೆ ಮನೆಯಿಂದ ಕಾಡಿಗೆ ತೆರಳಿ ಬಿಸಾಡಿದ್ದ, ಮೃತದೇಹ ಬಿಸಾಡಲು ಕಂಠಪೂರ್ತಿ ಕುಡಿದು ತೆರಳ್ತಿದ್ದ, ಮದ್ಯದ ಅಮಲಿನಲ್ಲೇ ಕಾಡಿಗೆ ಶ್ರದ್ಧಾ ಪೀಸ್ ಎಸೆಯುತ್ತಿದ್ದನು.
ಅಫ್ತಾಬ್ ಕರಾಳ ಕಿಸ್ಟರಿ ಕೇಳಿ ಪೊಲೀಸರೇ ದಂಗಾಗಿದ್ದು, ಸೈಕೋ ಕಾಮದಾಹಕ್ಕೆ ಬಲಿಯಾಗಿದ್ದು ಎಷ್ಟು ಗೊತ್ತಾ..?-
ಸೈಕ್ ಅಫ್ತಾಬ್ ರಂಗಿನಾಟ ಒಂದಾ.. ಎರಡಾ… ಡೇಟಿಂಗ್ ಆ್ಯಪ್ನಲ್ಲೇ ಹುಡುಗಿಯರಿಗಾಗಿ ಹುಡುಕಾಟ ನಡೆಸಿದ್ದಾನೆ.
ಶ್ರದ್ಧಾಳಿಗೂ ಮುನ್ನ ಅಫ್ತಾಬ್ ಕಾಮದಾಟಕ್ಕೆ ಒಳಗಾಗಿದ್ದೆಷ್ಟು? ಶ್ರದ್ಧಾಳಿಗೂ ಮುನ್ನವೇ ಹಲವರ ಜೊತೆ ಅಫ್ತಾಬ್ ಸ್ನೇಹ ಮಾಡಿಕೊಂಡಿದ್ದನು. ಸ್ನೇಹ ಅಂತ ಕ್ಲೋಸ್ ಆಗಿ ಪ್ರೀತಿ ಪಾಠ ಮಾಡ್ತಿದ್ದ. ಶ್ರದ್ಧಾಗೂ ಮೊದಲು ಹಲವರ ಜೊತೆ ಅಫ್ತಾಬ್ ಲವ್ ಮಾಡಿದ್ದ. ಈವರೆಗೂ ಐವರು ಯುವತಿಯರ ಬಾಳಲ್ಲಿ ರಂಗಿನಾಟ ಆಡಿದ್ಧಾನೆ. ಹಂತಕ ಅಫ್ತಾಬ್ ಹಲವರ ಜೊತೆ ಡೇಟಿಂಗ್ ಮಾಡಿದ್ದ, ನಾಲ್ವರು ಯುವತಿಯರ ಜೊತೆ ನಂಟು ಹೊಂದಿದ್ದನು. ರಾಕ್ಷಸ ಅಫ್ತಾಬ್ ಎಲ್ಲರನ್ನೂ ಬಳಸಿ ಕೈ ಕೊಟ್ಟಿದ್ದ, ಇತ್ತ ಶ್ರದ್ಧಾ ಮಾತ್ರ ಮದ್ವೆಯಾಗು ಅಂತ ಬೆನ್ನು ಬಿದ್ದಿದ್ಲು. ಶ್ರದ್ಧಾಳ ಕಾಟ ತಾಳಲಾರದೆ ಪೀಸ್.. ಪೀಸ್ ಮಾಡಿದ್ಧಾನೆ. ಶ್ರದ್ಧಾ ಫ್ರಿಡ್ಜ್ನಲ್ಲಿ ಇರುವಾಗ್ಲೆ ಮತ್ತೊಬ್ಬಳನ್ನ ಕರೆತಂದಿದ್ದ, ಶ್ರದ್ಧಾಳ ಹೆಣ ಮನೆಯಲ್ಲಿ ಇರುವಾಗ್ಲೆ ಮತ್ತೊಬ್ಬಳ ಜೊತೆ ಸರಸವಾಡಿದ್ದಾನೆ.
ಅಫ್ತಾಬ್ ರಕ್ತಸಿಕ್ತ ತನಿಖೆಯಲ್ಲಿ ರಹಸ್ಯ ಬಯಲಾಗಿದ್ದು, ದೆಹಲಿ ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲಾಗಿದೆ.
ಶ್ರದ್ಧಾ ಮಾಂಸ ದೆಹಲಿ ಕಾಡಿನ ಎಲ್ಲೆಲ್ಲಿ ಇತ್ತು ಗೊತ್ತಾ, 35 ಪೀಸ್ನಲ್ಲಿ ಈ ವರೆಗೆ ಎಷ್ಟು ಪೀಸ್ ಸಿಕ್ತು ಗೊತ್ತಾ..? ಕಾಡಿನಲ್ಲಿ ಮಹಜರು ಮಾಡೋ ವೇಳೆ ಪೊಲೀಸರೇ ದಂಗಾಗಿದ್ದಾರೆ. ದೆಹಲಿ ಪೊಲೀಸರು ಶ್ರದ್ಧಾಳ 13 ಪೀಸ್ಗಳನ್ನ ಪತ್ತೆ ಮಾಡಿದ್ಧಾರೆ.
ಪೊಲೀಸ್ ಹಂತಕನ್ನೇ ಕರೆದೊಯ್ದು ಮಾಂಸ ಪೀಸ್ ಪತ್ತೆ ಮಾಡಿದ್ಧಾರೆ. 35 ಪೀಸ್ಗಳಲ್ಲಿ ಈ ವರೆಗೆ 13 ಪೀಸ್ಗಳು ಪತ್ತೆಯಾಗಿದೆ. ತನಿಖಾಧಿಕಾರಿಗಳು ಮಾಂಸ ಪರೀಕ್ಷೆಗೆ ರವಾನಿಸಿದ್ಧಾರೆ. ಅಧಿಕಾರಿಗಳು ಶ್ರದ್ಧಾಳ ತಂದೆ DNA ಸಂಗ್ರಹ ಮಾಡಿದ್ದಾರೆ. ಕಾಡಲ್ಲಿ ಸಿಕ್ಕಿರೋ ಮಾಂಸಕ್ಕೂ, ತಂದೆಯ DNAಗೂ ಪರೀಕ್ಷೆ , ಇನ್ನೂಳಿದ ದೇಹದ ಚೂರಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.
ಅಫ್ತಾಬ್ ಪೈಶಾಚಿಕ ಕೃತ್ಯಕ್ಕೆ ವ್ಯಕ್ತವಾಯ್ತು ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಶ್ರದ್ಧಾ ಮರ್ಡರ್ ಹಿಂದೆ ಲವ್ ಜಿಹಾದ್ ಅನುಮಾನ ಮೂಡುತ್ತಿದೆ. ಶ್ರದ್ಧಾ ತಂದೆ ಲವ್ ಜಿಹಾದ್ ಆರೋಪ ಮಾಡಿದ್ದಾರೆ. ನನ್ನ ಮಗಳನ್ನ ಟಾರ್ಗೆಟ್ ಮಾಡಿದ್ದಾರೆಂದು ಆರೋಪಿಸಿದ್ದು, ಅಫ್ತಾಬ್ ನನ್ನ ಮಗಳನ್ನ ಬೇಕಂತಲೇ ಲವ್ ಮಾಡಿದ್ದ, ನಮ್ಮ ವಿರೋಧ ಇದ್ರೂ ದೆಹಲಿಗೆ ಕರೆದುಕೊಂಡು ಹೋಗಿದ್ದ, ಈಗ ನನ್ನ ಮಗಳನ್ನ ಕೊಂದು ಮುಗಿಸಿದ ಎಂದು ಆರೋಪ ಮಾಡಿದ್ಧಾರೆ. ಇತ್ತ ಬಿಜೆಪಿಯಿಂದಲೂ ಅಫ್ತಾಬ್ ಕೃತ್ಯದ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದು, ಲವ್ ಜಿಹಾದ್ ಆರೋಪ ಮಾಡಿ ಭಾರೀ ಪ್ರೊಟೆಸ್ಟ್ ನಡೆಸಿದ್ಧಾರೆ. ದೆಹಲಿಯಲ್ಲಿ ಭುಗಿಲೆದ್ದ ಬಿಜೆಪಿ ಪ್ರತಿಭಟನೆ ನಡೆಸಿ, ಹಂತಕ ಅಫ್ತಾಬ್ಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ರಾಜಕೀಯದಿಂದ ನನ್ನ ಸಿನಿ ಸ್ನೇಹಿತರ ಜೊತೆಗಿರುವ ಸಂಬಂಧ ಹಾಳಾಗಿದೆ .. ಪ್ರಕಾಶ್ ರೈ..