ಬೆಂಗಳೂರು : ಐಟಿ ಸಿಟಿಯಲ್ಲಿ ಅಕ್ಷರಶಃ ಹಣದ ಮಳೆ ಸುರಿದಿದ್ದು, ಮಳೆ ಹನಿಯಂತೆ ಗರಿ-ಗರಿ ನೋಟು ಸುರಿದಿದೆ. ನೋಟು ಆಯ್ದುಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ದುಡ್ಡಿನ ಮಳೆ ಸುರಿಸಿದ ಆ ವ್ಯಕ್ತಿ ಯಾರ್ ಗೊತ್ತಾ ಈ ಸ್ಟೋರಿ ಓದಿ..
ಕತ್ತಲ್ಲಿ ದೊಡ್ಡ ಗಡಿಯಾರ.. ಬ್ಯಾಗ್ ತುಂಬಾ ನೋಟು , K.R.ಮಾರ್ಕೆಟ್ನಲ್ಲಿ ದುಡ್ಡು ಮಳೆಯಂತೆ ಸುರಿದಿದೆ. ವ್ಯಕ್ತಿಯೊಬ್ಬ ಟೈಂ ಈಸ್ ಮನಿ ಅಂತಾ ಫ್ಲೈ ಓವರ್ ಮೇಲೆ ನಿಂತು 100, 20,10 ರೂಪಾಯಿ ನೋಟುಗಳನ್ನು ಎರಚಿದ್ದಾನೆ. ನೋಟು ಕೇಳಿದ್ರೆ ಯಾರ ಕೈಗೆ ಕೊಡ್ತಿರಲಿಲ್ಲ, ಮೇಲಿಂದ ಎಸೆದು.. ಎಸೆದು.. ಹೊರಟೇಹೋಗಿದ್ದಾನೆ.
ಇದು ದುಡ್ಡು ಎಸೆದವನ ರಣರೋಚಕ ಬ್ಯಾಗ್ಗ್ರೌಂಡ್ ಇದಾಗಿದ್ದು, ಫ್ಲೈ ಓವರ್ ಮೇಲೆ ನಿಂತು ನೋಟು ಎರಚಿದ ವ್ಯಕ್ತಿ ಅರುಣ್ ಆಗಿದ್ದಾನೆ. ಅರುಣ್ ಕಬಡ್ಡಿ ಆಟಗಾರ, ಈವೆಂಟ್ ಮ್ಯಾನೇಜರ್ ಆಗಿದ್ದನು. ಅರುಣ್ ವಿ.9 ಈವೆಂಟ್ ಕಂಪನಿ ಸ್ಥಾಪಿಸಿದ್ದನು. ಬೆಂಗಳೂರಿನ ನಾಗರಭಾವಿಯಲ್ಲಿರುವ ಕಚೇರಿಯಿದೆ.ಅರುಣ್ ಫಸ್ಟ್ ಈವೆಂಟ್ ಬ್ಲಾಗ್ ಸ್ಟಾರ್ಟ್ ಮಾಡಿದ್ದನು. ಕರ್ನಾಟಕದ ಮೊದಲ ಈವೆಂಟ್ ಬ್ಲಾಗರ್ ಅರುಣ್ ಆಗಿದ್ದಾನೆ. ಅರುಣ್ ಬಿಲ್ಡಪ್ ಹೇಗಿದೆ ಗೊತ್ತಾ..? ಪ್ರಚಾರದ ಹುಚ್ಚಾ..?
ಇದನ್ನೂ ಓದಿ : ಭಾರತ್ ಜೋಡೊ ಯಾತ್ರೆ ಸಮಾರೋಪ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಿಲ್ಲವೆಂದು ಖರ್ಗೆಗೆ ಪತ್ರ ಬರೆದ ದೇವೇಗೌಡರು..!