ಬೆಂಗಳೂರು : ಬೆಂಗಳೂರಲ್ಲಿ ಫ್ಲಾಟ್ ಖರೀದಿಸುವ ಪ್ರತಿಯೊಬ್ಬರು ನೋಡ್ಲೇಬೇಕಾದ ಸ್ಟೋರಿ ಇದಾಗಿದ್ದು, ಫ್ಲಾಟ್ ಕೊಡ್ತೀವಿ ಅಂತಾ ಕೋಟಿ ಕೋಟಿ ವಸೂಲಿ ಮಾಡ್ತಾರೆ ಹುಷಾರ್..
ವಸೂಲಿ ಮಾಡಿ ಫ್ಲಾಟ್ ನೀಡದ ಬಿಲ್ಡರ್ಗಳಿಗೆ ಸಂಕಷ್ಟ ಎದುರಾಗಿದ್ದು, ನಿಯಮ ಉಲ್ಲಂಘಿಸುವ ಬಿಲ್ಡರ್ಗಳಿಗೆ ಬಿಸಿ ಮುಟ್ಟಿಸಲು ರೇರಾ ಮುಂದಾಗಿದೆ. ಬಿಲ್ಡರ್ಗಳ ವಿರುದ್ಧ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಕ್ರಮ ಕೈಗೊಂಡಿದ್ದು, ನಿಗದಿತ ಸಮಯಕ್ಕೆ ಪ್ಲಾಟ್ ಕಟ್ಟಿಕೊಡದೇ ನಿಯಮ ಉಲ್ಲಂಘನೆ ಮಾಡಲಾಗಿದೆ. ಹೀಗಾಗಿ ನಿಯಮ ಉಲ್ಲಂಘನೆ ಮಾಡಿರೋ ಕಂಪನಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮಕ್ಕೆ ಮುಂದಾಗಲಾಗಿದೆ. ಸಂಚಯ ಲ್ಯಾಂಡ್ ಅಂಡ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಸಂಚಯ ಕಂಪನಿ ವತಿಯಿಂದ ನಿರ್ಮಾಣ ಆಗ್ತಿರುವ ದಿ ಗ್ರೀನ್ ಪ್ರಾಜೆಕ್ಟ್ ಹೆಸರಲ್ಲಿ ಆನೇಕಲ್ ಬಳಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲಾಗಿದ್ದು, ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಫ್ಲಾಟ್ ನೀಡದ ಹಿನ್ನೆಲೆ ಗ್ರಾಹಕರು ಕಂಪನಿ ವಿರುದ್ಧ ರೇರಾಗೆ ದೂರು ನೀಡಿದ್ದಾರೆ. ಈ ಬಗ್ಗೆ ರೇರಾ ಕಾರ್ಯದರ್ಶಿ ಇಬ್ರಾಹಿಂ ಮೈಗೂರ್ ಮಾಹಿತಿ ಕೊಟ್ಟಿದ್ದಾರೆ. ‘
ಇದನ್ನೂ ಓದಿ : ಜನವರಿಯಲ್ಲಿ ಮುಚ್ಚಿಹೋಗುತ್ತಾ ವಿಜಯ ಕರ್ನಾಟಕ ?