ಬೆಂಗಳೂರು: ಈಶ್ವರಪ್ಪರನ್ನು ಅಲ್ಲ ಡಿಕೆಶಿಯನ್ನು ಜೈಲಿಗೆ ಹಾಕ್ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಡಿಕೆಶಿಗೆ ಪೊಲೀಸರು ಹಾಕಿದ ಬ್ಯಾರಿಕೇಡ್ ಹಾರುವ ಶಕ್ತಿ ಇದೆ, ಅದೇ ಜೈಲಿನಲ್ಲಿ ಇದ್ದಾಗ ಬಿಪಿ, ಶುಗರ್ ಹೆಚ್ಚಾಗಿದೆ ಅಂದಿದ್ದರು, ನೀವು ಬ್ಯಾರಿಕೇಡ್ ಜಿಗಿತೀರಿ ಅಂದ್ರೆ ನೀವು ಫಿಟ್ ಆಗಿದ್ದೀರ, ಹೀಗಾಗಿ ನೀವು ಆರೋಗ್ಯಕರವಾಗಿ ಇದ್ದೀರಿ. ಆರೋಗ್ಯ ಸಮಸ್ಯೆ ಹೇಳಿ ಜೈಲಿನಿಂದ ಹೊರಗೆ ಬಂದಿದ್ದೀರಿ, ಇದನ್ನ ಕೋರ್ಟ್ ಕೂಡ ಗಮನಿಸಿ ಮತ್ತೆ ಜೈಲಿಗೆ ಕಳಿಸಬೇಕು ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಪವಿತ್ರ ರಂಜಾನ್: ನಲಪಾಡ್ ಪೆವಿಲಿಯನ್ನಲ್ಲಿಇಫ್ತಿಯಾರ್ ಕೂಟ..! ಸರ್ವರಿಗೂ ಆಹ್ವಾನ ನೀಡಿದ ಸಿದ್ದರಾಮಯ್ಯ..!