ಗುವಾಹತಿ: ನನಗೆ ಸಿಎಂ ಸ್ಥಾನ ಬೇಡ, ನಾನು ಮುಖ್ಯಮಂತ್ರಿ ಅಗುವುದಿಲ್ಲ ಎಂದು ಏಕನಾಥ್ ಶಿಂಧೆ ಎನ್ ಸಿ ಪಿ ವರಿಷ್ಠ ಶರದ್ ಪವಾರ್ ಅವರು ನೀಡಿರುವ ಆಫರ್ ಅನ್ನು ತಿರಸ್ಕರಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ ಮಹಾ ವಿಕಾಸ್ ಅಘಾಡಿ ಸರ್ಕಾರ ನಡೆಯೋದು ಸಾಧ್ಯವಿಲ್ಲ, ಶಿವಸೇನೆ ಅಘಾಡಿ ಮೈತ್ರಿಕೂಟದಿಂದ ಹೊರ ಬರಬೇಕು. ಮಹಾರಾಷ್ಟ್ರದ ಹಿತದೃಷ್ಟಿಯಿಂದ ಮೈತ್ರಿ ಕಡಿದುಕೊಳ್ಳಬೇಕು. ಶಿವಸೈನಿಕರ ಮನಸ್ಸಿನಲ್ಲಿರೋ ಭಾವನೆಗಳಿಗೆ ಬೆಲೆ ಕೊಡಿ. ಅನೈಸರ್ಗಿಕ ಮೈತ್ರಿಕೂಟದೊಂದಿಗೆ ಅಧಿಕಾರ ಬೇಡ್ವೇ ಬೇಡ. ಇನ್ನು ಕಳೆದ ಎರಡೂವರೆ ವರ್ಷದಲ್ಲಿ ಶಿವಸೇನೆ ಹೊರತುಪಡಿಸಿ ಸರ್ಕಾರದ ಉಳಿದ ಅಂಗ ಪಕ್ಷಗಳು ಹೆಚ್ಚಿನ ಲಾಭ ಪಡೆದುಕೊಂಡಿವೆ. ಆ ಎರಡೂ ಪಕ್ಷಗಳು ಬಲಿಷ್ಠಗೊಳ್ಳುತ್ತಿದ್ದರೆ ಶಿವಸೇನೆ ತನ್ನ ನೆಲೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದೆ ಎಂದು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ಧಾರೆ.
३. पक्ष आणि शिवसैनिक टिकविण्यासाठी अनैसर्गिक आघाडीतून बाहेर पडणे अत्यावश्यक.
४. महाराष्ट्रहितासाठी आता निर्णय घेणे गरजेचे.#HindutvaForever
— Eknath Shinde – एकनाथ शिंदे (@mieknathshinde) June 22, 2022
ಇನ್ನು ಏಕನಾಥ್ ಶಿಂಧೆ #hindutvaforever ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ಧಾರೆ. ಇವೇ ವೇಳೆ ಸಿಎಂ ಉದ್ಧವ್ ಠಾಕ್ರೆ ಅವರು ಸರ್ಕಾರಿ ನಿವಾಸ ವರ್ಷಾ ತ್ಯಜಿಸಿ ತಮ್ಮ ಮಾತೋಶ್ರೀ ನಿವಾಸಕ್ಕೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ ಠಾಕ್ರೆ ಅವರ ಎರಡೂ ನಿವಾಸಗಳ ಮುಂದೆ ಶಿವಸೇನೆ ಕಾರ್ಯಕರ್ತರು ಜಮಾಯಿಸಿದ್ದಾರೆ.