ಉಡುಪಿ: ಉಡುಪಿಯ ಉಪ್ಪುಂದ ದುರ್ಗಾಪರಮೇಶ್ವರಿ ದೇವಳದ ರಾಜಗೋಪುರ ಸಮರ್ಪಣಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು.
ಉದ್ಯಮಿ ಯು.ಬಿ. ಶೆಟ್ಟಿ ಕುಟುಂಬದವರು ನಡೆಸಿದ ಉಪ್ಪುಂದ ದುರ್ಗಾಪರಮೇಶ್ವರಿ ದೇವಳದ ರಾಜಗೋಪುರ ಸಮರ್ಪಣಾ ಕಾರ್ಯಕ್ರಮ ಮತ್ತು ಶತಚಂಡಿಯಾಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಭಾಗಿಯಾಗಿದ್ದರು. ಯು..ಬಿ ಶೆಟ್ಟಿ ಕುಟುಂಬದವರು ಪೂರ್ಣ ಕುಂಭ ಸ್ವಾಗತದೊಂದಿಗೆ ಮಾಜಿ ಸಚಿವರನ್ನು ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಉದ್ಯಮಿ ಸೀತಾರಾಂ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವರ್ ಭಾಗಿಯಾಗಿದ್ದರು.
ವರದಿ : ಮಂಜುನಾಥ್
ಸ್ಥಳ : ಉಡುಪಿ
ಇದನ್ನೂ ಓದಿ : ನಾನು ತಪ್ಪು ಮಾಡಿದ್ರೆ, ಆ ತಪ್ಪಿನ ಶಿಕ್ಷೆ ಅನುಭವಿಸಲು ಬದ್ದನಾಗಿದ್ದೇನೆ : ಡಿ. ಕೆ. ಶಿವಕುಮಾರ್…