ಬೆಂಗಳೂರು: ನ್ಯಾಷನಲ್ ಕ್ರಶ್ ಎಂದೇ ಫೇಮಸ್ ಆಗಿರುವ ಬಹು ಭಾಷಾ ನಟಿ ರಶ್ಮಿಕಾ ಮಂದಣ್ಣ ಒಂದಲ್ಲಾ ಒಂದು ಕಾಂಟ್ರವರ್ಸಿ ಯಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಪುಷ್ಪ ಸಿನಿಮಾಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡೋಕೆ ಟೈಮ್ ಇರಲಿಲ್ಲ ಎಂಬ ಹೇಳಿಕೆ ನೀಡುವುದರ ಮೂಲಕ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದಾರೆ.
ಇತ್ತೀಚೆಗೆ ನಡೆದ ಪುಷ್ಪ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ, ಪುಷ್ಪ ಸಿನಿಮಾಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡೋಕೆ ಟೈಮ್ ಇರಲಿಲ್ಲ ಎಂದು ಹೇಳಿದ್ದರು. ಇದೀಗ ಈ ಹೇಳಿಕೆ ವಿರುದ್ಧ ಕನ್ನಡಪರ ಹೋರಾಟಗಾರರು ಕಿಡಿಕಾರುತ್ತಿದ್ದು, ಕನ್ನಡ ಬಗ್ಗೆ ಕಡೆಗಣಿಸಿ ಹೇಳಿಕೆ ನೀಡಿದ್ದಾರೆ, ಬೆಳೆಯೋಕೆ ಕನ್ನಡ ಸಿನಿಮಾ ಬೇಕು, ಕನ್ನಡಲ್ಲಿ ಡಬ್ಬಿಂಗ್ ಮಾಡೋಕೆ ಟೈಂ ಇಲ್ಲ ಅಂತಾರೆ. ನಿಮ್ಮನ್ನ ಬೆಳೆಸಿರೋದು ಕನ್ನಡಿಗರು ಅದನ್ನ ಮರೆಯಬೇಡಿ, ಮುಂದಿನ ದಿನಗಳಲ್ಲಿ ನಿಮ್ಮ ಸಿನಿಮಾ ಬ್ಯಾನ್ ಮಾಡ್ತೀವಿ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಇದನ್ನೂ ಓದಿ: ನೈಟ್ ಕರ್ಫ್ಯೂ ಯಾರೂ ಉಲ್ಲಂಘನೆ ಮಾಡ್ಬೇಡಿ.. ಯಾರು ಹೊರಗಡೆ ಓಡಾಡೋಕೆ ಬಿಡಲ್ಲ : ಕಮಲ್ಪಂತ್ ..