ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಡ್ರಗ್ಸ್ ವಿಕೃತಿ ಮೆರೆದಿದ್ದಾರೆ. ಮುಂಜಾನೆಯೇ ಮೈಸೂರು ಪೊಲೀಸರ ಮಹಾ ರೇಡ್ ನಡೆಸಲಾಗಿದೆ. ಡ್ರಗ್ಸ್ ಪೆಡ್ಲರ್ಸ್ ಮನೆಗಳ ಮೇಲೆ ಪೊಲೀಸ್ ದಾಳಿ ನಡೆಸಿದ್ದು, DCP ಮುತ್ತುರಾಜ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.
ಬೆಳಗಿನ ಜಾವ 4 ಗಂಡೆಯಿಂದ 7 ಗಂಟೆವರೆಗೆ ಕಾರ್ಯಾಚರಣೆ ನಡೆದಿದೆ. 40 ಪೊಲೀಸ್ ತಂಡಗಳು ಏಕಕಾಲಕ್ಕೆ ವಿಭಿನ್ನ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆ ವೇಳೆ ಅರ್ಧ ಕೆಜಿ ಗಾಂಜಾ ವಶ ಪಡೆದಿದ್ದು, 9 ಮಂದಿ ಡ್ರಗ್ಸ್ ಪೆಡ್ಲರ್ ಗಳು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಪೆಡ್ಲರ್ ಗಳಿಗೆ ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಡ್ರಿಲ್ ನಡೆಸಿದ್ದಾರೆ.
ಇದನ್ನೂ ಓದಿ : ಸ್ಯಾಂಟ್ರೋ ರವಿ ವಿಗ್ ಸೀಕ್ರೆಟ್ ವಿಚಾರಣೆ ವೇಳೆ ಬಯಲು..! 4 ವರ್ಷದ ನಂತರ ಗಂಡನ ಒರಿಜಿನಲ್ ವೇಷ ಕಂಡು ಸ್ಯಾಂಟ್ರೋ ಪತ್ನಿ ತಬ್ಬಿಬ್ಬು..