ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ವಿಚಾರವೀಗ ಮತ್ತಷ್ಟು ಸದ್ದು ಮಾಡಿದೆ. ಇದೀಗ ನಟ ಹಾಗು ಖ್ಯಾತ ಆ್ಯಂಕರ್ ಮತ್ತು ಮತ್ತೊಬ್ಬ ನಟನಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಮೊನ್ನೆಮೊನ್ನೆಯಷ್ಟೇ ನಟ ದಿಗಂತ್ ಹಾಗೂ ಐಂದ್ರಿತಾ ರೈ ಅವರಿಗೆ ಸಿಸಿಬಿಯಿಂದ ನೋಟಿಸ್ ನೀಡಿ ವಿಚಾರಣೆ ಮಾಡಿ ಇಬ್ಬರ ಫೋನ್ಗಳನ್ನು ವಶಕ್ಕೆ ಪಡೆದುಕೊಂಡು ವಾಪಸ್ ಕಳುಹಿಸಿದ್ದರು.
ಇದೀಗ ಮಾಜಿ ಶಾಸಕ ಆರ್ ವಿ .ದೇವರಾಜ್ ಅವರ ಪುತ್ರ ಯುವರಾಜ್, ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಂತೋಷ್ ಕುಮಾರ್ ಹಾಗೂ ನಟ, ನಿರೂಪಕ ಅಕುಲ್ ಬಾಲಾಜಿ ಅವರಿಗೆ ಸಿಸಿಬಿ ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ರವಾನಿಸಿದ್ದಾರೆ.
ಇದನ್ನೂ ಓದಿ : ಮಳೆಯ ಅಬ್ಬರ ‘ಉತ್ತರ’ ತತ್ತರ..! ವರುಣನ ಆರ್ಭಟಕ್ಕೆ ನೊಂದ ಜೀವಗಳೆಷ್ಟೋ..!
ಲಾಕ್ಡೌನ್ ಸಮಯದಲ್ಲಿ ಅಕುಲ್ ಬಾಲಾಜಿ ಅವರ ಚಿಕ್ಕಬಳ್ಳಾಪುರದ ಫಾರ್ಮ್ ಹೌಸ್ನಲ್ಲಿ ಮದುವೆ ನಡೆದಿತ್ತು. ಪಾರ್ಟಿ ಸಹ ನಡೆದಿದೆ ಎಂದು ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ದೂರು ನೀಡಲಾಗಿತ್ತು. ಅಕುಲ್ ಅವರ ಮೇಲೆ ಎಫ್ ಐ ಆರ್ ಸಹ ದಾಖಲಾಗಿತ್ತು.
ಇದನ್ನೂ ಒದಿ : ಮೇಘನಾರಾಜ್ಗಾಗಿ ಚಂದನ್ ಶೆಟ್ಟಿ ಹಾಡು…! ಚಿರು ನೆನಪಲ್ಲಿ ವೈರಲ್ ಆದ ಈ ಹಾಡು ಕೇಳಿ..!
ಈ ಬಗ್ಗೆ ಬಿಟಿವಿಗೆ ಪ್ರತಿಕ್ರಿಯೆ ನೀಡಿರುವ ಅಕುಲ್ ಬಾಲಾಜಿ. ನನ್ನ ಹೆಸರು ಇಲ್ಲಿ ಯಾಕೆ ಬಂತೋ ಗೊತ್ತಿಲ್ಲ. ಚಿಕ್ಕ ಬಳ್ಳಾಪುರದಲ್ಲಿ ನನ್ನದು ಒಂದು ಸಣ್ಣ ಫಾರ್ಮ್ ಹೌಸ್ ಆದ್ರೆ ಅದನ್ನ ನಾನು ಲೀಸ್ಗೆ ಕೊಟ್ಟಿದ್ದೀನಿ. ಅಲ್ಲಿ ಕೆಲ ತಿಂಗಳ ಹಿಂದೆ ನಡೆದ ಮದುವೆ ವಿಚಾರವಾಗಿಯೂ ಲಾಕ್ಡೌನ್ ಸಮಯದಲ್ಲಿ ನನ್ನ ಇನ್ವಾಲ್ವ್ ಮೆಂಟ್ ಇಲ್ಲದಿದ್ದರೂ ನನ್ನ ಮೇಲೆ ಎಫ್ ಐ ಆರ್ ಆಗಿತ್ತು. ಅದನ್ನು ಕೂಡ ಸಾಲ್ವ್ ಮಾಡಿದೆ.
ಇದನ್ನೂ ಒದಿ : ಗುಡ್ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ! ಈ ಕ್ಯೂಟ್ ಜೋಡಿ ಫ್ಯೂಚರ್ ಪ್ಲಾನ್ ಏನ್ ಗೊತ್ತಾ..?
ನನಗೂ ಸಹ ಹೆಂಡತಿ ಮಕ್ಕಳಿದ್ದಾರೆ. ಅತ್ತೆ ಮಾವ ಇದ್ದಾರೆ. ನಾವು ತಪ್ಪು ಮಾಡಿದ್ರೆ ನಮ್ಮ ಫ್ಯಾಮಿಲಿ ಗೆ ಅದು ತಟ್ಟಲ್ವಾ. ನಾನು ಈಗ ಹೈದರಾಬಾದ್ ನಲ್ಲಿದ್ದೇನೆ. ನಾಳೆ ಹೋಗಿ ವಿಚಾರಣೆಗೆ ಹಾಜರಾಗ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : ಈ ಸುದ್ದಿಯನ್ನು ಓದಿ… ಆದ್ರೆ ಪೂರಾ ನಂಬಬೇಡಿ… ಸ್ಯಾಂಡಲ್ವುಡ್ ರೋಚಕ ಸ್ಟೋರಿಗಳಿವು..!
ಮಾಜಿ ಶಾಸಕ ಆರ್ ವಿ ದೇವರಾಜ್ ಅವರ ಮಗ ಯುವರಾಜ್ ಅವರ ಮಾತನಾಡಿ. ನನಗೂ ಈ ನಟ ನಟಿಯರಿಗೂ ಏನಾದರೂ ಸಂಬಂಧ ಇದೆ ಅಂತ ಪ್ರೂವ್ ಆದರೆ ನೀವ್ ಏನ್ ಕೆಲ್ಸ ಹೇಳ್ತೀರೋ ಅದನ್ನ ನಾನು ಮಾಡೋಕ್ ರೆಡಿ ಇದೀನಿ. ಬೈ ಮಿಸ್ಟೇಕ್ ನನ್ನ ಹೆಸರು ಇದರಲ್ಲಿ ಸಿಲುಕಿಕೊಂಡಿದೆಯೋ ಅಥವಾ ಏನೋ ಗೊತ್ತಿಲ್ಲ. ನಾಳೆ ಪೊಲೀಸರ ಮುಂದೆ ಹೋಗ್ತೀನಿ 200 ಪರ್ಸೆಂಟ್ ಸಹಕಾರ ನೀಡ್ತೇನೆ ಎಂದಿದ್ದಾರೆ. ಆದರೆ ಅದಾಗಲೇ ಪೊಲೀಸರ ವಶದಲ್ಲಿರುವ ವೈಭವ್ ಜೈನ್ ಅವರ ಪರಿಚಯ ಇರೋದು ನಿಜ ಎಂದಿದ್ದಾರೆ.
ಇದನ್ನೂ ಓದಿ : 2 ಕೋಟಿ ಡಿಮ್ಯಾಂಡ್ ಮಾಡಿದ್ದೀಯಲ್ಲ ಯವ್ವಿ ಯವ್ವಿ..! ಮೊಡವೆಗಳಿಂದ್ಲೇ ಹುಚ್ಚು ಹಿಡಿಸಿದ ಬ್ಯೂಟಿ..!
ಸದ್ಯ ನಟ ಸಂತೋಷ್ ಅವರು ವೈಭವ್ ಜೈನ್ ಜೊತೆ ಬ್ಯುಸಿನೆಸ್ ಪಾರ್ಟನರ್ ಶಿಪ್ ಇತ್ತು ಎನ್ನಲಾಗಿದ್ದು. ಸಂತೋಷ್ ಅವರ ಹೆಸರನ್ನು ವೈಭವ್ ಜೈನ್ ಅವರೇ ಹೇಳಿದ್ದರೆನ್ನಲಾಗಿದ್ದು, ಹಾಗೂ ನಟ ಅಕುಲ್ ಬಾಲಾಜಿ ಅವರು ತಮ್ಮ ರೆಸಾರ್ಟ್ಅನ್ನು ವೀರೇನ್ ಖನ್ನಾಗೆ ಎರಡು ಬಾರಿ ಬಾಡಿಗೆಗೆ ನೀಡಲಾಗಿದೆ ಎನ್ನಲಾಗಿದೆ. ಹಾಗೂ ಆರ್ವಿ. ಯುವರಾಜ್ ಅವರ ಹೆಸರನ್ನು ಪೊಲೀಸರ ವಶದಲ್ಲಿರುವ ವೈಭವ್ ಜೈನ್ ಹೇಳಿದ್ದಾನೆ ಎನ್ನಲಾಗಿದೆ.ಇಂದು ಪಡೆದ ಮೂವರೂ ಸಹ ಇದಕ್ಕೂ ಅವರಿಗೂ ಸಂಬಂಧವಿಲ್ಲ ಎಂದೇ ಹೇಳಿದ್ದಾರೆ. ಮುಂದೇನಾಗುತ್ತೆ ಕಾದು ನೋಡ್ಬೇಕಿದೆ.