ಎಲ್ಲಾ ಕಡೆ ತಾವು ಮಾಡಿರೋ ಸಾಧನೆಗಳು ಸತ್ಯ ಎಂದು ಸಾಬೀತು ಪಡಿಸಕ್ಕೆ ಪ್ರತಾಪ್ ಸಾಕಷ್ಟು ಉತ್ತರಗಳನ್ನು ಬಿಟಿವಿ ಸ್ಟುಡಿಯೋದಲ್ಲಿ ಕೊಟ್ಟಿದ್ದಾರೆ. ನಾನು ಬಹಳ ಕಷ್ಟ ಪಟ್ಟಿದ್ದೇನೆ ನಾನು ರೈತನ ಮಗ ಎಂಬ ಕಾರಣಕ್ಕೆ ಈ ರೀತಿ ಆರೋಪ ಮಾಡಲಾಗುತ್ತಿದೆ. ದೇಶ ವಿದೇಶಗಳನ್ನು ಸುತ್ತಿದ್ದೇನೆ. ನಾನು ಡ್ರೋನ್ ತಯಾರಿಸಿರುವುದು ನಿಜ ಎಂದು ತನ್ನ ಬಗ್ಗೆ ಹೇಳಿಕೊಂಡ ಪ್ರತಾಪ್, ತನ್ನ ಕ್ಲಾಸ್ ಮೇಟ್ ಪ್ರಶ್ನೆಗೆ ಉತ್ತರಿಸಲಾಗದೆ ತಡವರಿಸಿದ್ದಾನೆ.
ಹೌದು, ಬಿಟಿವಿ ಸ್ಟುಡಿಯೋದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಾಪ್ ಗೆ ಅವರ ಇಂಜಿನಿಯರಿಂಗ್ ಓದುವ ಸಮಯದಲ್ಲಿದ್ದ ಕ್ಲಾಸ್ಮೇಟ್ ಆಗಿದ್ದ ದರ್ಶನ್ ಕಾಲ್ ಮಾಡಿದ್ರು. ಟೊಕಿಕೋದಲ್ಲಿ ರೀಸರ್ಚ್ ವಿದ್ಯಾರ್ಥಿಯಾಗಿರುವ ಅವರು ಕರ್ನಾಟಕದಲ್ಲಿ ಪ್ರತಾಪ್ ಅವರ ಬ್ಯಾಚ್ ಮೇಟ್ ಆಗಿದ್ದರು. ಡ್ರೋನ್ ಬಗ್ಗೆ ಯಾಗವ ಪ್ರೋ್ಗ್ರಾಮಿಂಗ್ ಲ್ಯಾಂಗ್ವೇಜ್ ಬಳಸಿದ್ದೀರಿ? ನೀವು ಮೈಕ್ರೊ ಕಂಟ್ರೋಲರ್, ಮೈಕ್ರೊ ಪ್ರೊಸೆಸರ್ ಬಗ್ಗೆ ಹೇಳುತ್ತೀರಾ? ನಿಮ್ಮ ಡ್ರೋನ್ ತಯಾರಿಕೆಯ ಕೇವಲ ಟೆಕ್ನಿಕಲ್ ಭಾಗವನ್ನು ಮಾತ್ರ ನನಗೆ ತಿಳಿಸಿ ಎಂದು ಪ್ರತಾಪ್ ಅವರ ಸಹಪಾಠಿ ಪ್ರಶ್ನಿಸಿದರು. ಇದಕ್ಕೆ ಪ್ರತಾಪ್ ಯಾವ ಟೆಕ್ನಿಕಲ್ ಟರ್ಮ್ಗಳನ್ನು ತಿಳಿಸಲಿಲ್ಲ. ಹಾಗಂತ ಮೌನವಾಗಿಯೂ ಕುಳಿತಿರಲಿಲ್ಲ. ಅವರು ತ,ಮ್ಮ ಗೆಳೆಯನ ಬಳಿ ಈಮೇಲ್ ಐಡಿ ಪಡೆದು ನಂತರ ನಿಮಗೆ ಬೇಕಾಗಿರುವ ಎಲ್ಲಾ ಮಾಹಿತಿಗಳನ್ನು ನಾನು ನಿಮಗೆ ಕಳುಹಿಸುತ್ತೇನೆ ಎಂದರು.
ಅಷ್ಟೆಲ್ಲಾ ಸಾಧನೆ ಮಾಡಿರುವ ಪ್ರತಾಪ್ ಗೆಳೆಯ ಕೇಳಿದ ಪ್ರಶ್ನೆಗೆ ತಕ್ಷಣ ಯಾಕೆ ಉತ್ತರ ನೀಡಲಿಲ್ಲ. ಬದಲಾಗಿ ವೈಯುಕ್ತಿಕವಾಗಿ ತಿಳಿಸುತ್ತೇನೆ ಎಂದರು. ವಿಷಯದ ಆಳ ಅಗಲ ತಿಳಿದ ಮೇಲೆ ಎಲ್ಲಿಯೇ ಆಗಲಿ ಕೇಳಿದ ತಕ್ಷಣ ಉತ್ತರಿಬಹುದಲ್ಲವಾ? ಆದರೆ ಪ್ರತಾಪ್ ಏಕೆ ಹೀಗೆ ಹೇಳಿದರು. ಇದು ಅನೇಕರ ಪ್ರಶ್ನೆಯಾಯಿತು. ಬಿಟಿವಿಯಲ್ಲಿ ಕ್ಲಾಸ್ಮೇಟ್ ದರ್ಶನ್ ಪ್ರಶ್ನೆಗೆ ಉತ್ತರಿಸದ ಡ್ರೋನ್ ಪ್ರತಾಪ್ ಮತ್ತೆ ಟ್ರೋಲ್ ಆಗಿದ್ದಾರೆ. ದರ್ಶನ್ ರಾಕ್, ಪ್ರತಾತ್ ಶಾಕ್ ಎಂದು ಟ್ರೋಲ್ ಶುರುವಾಗಿದೆ !