ಡ್ರೋನ್ ಪ್ರತಾಪ್ ಎಂದೇ ಖ್ಯಾತಿ ಪಡೆದಿದ್ದ ಮಂಡ್ಯದ ಹುಡುಗ ಪ್ರತಾಪ್ ನಿಜಕ್ಕೂ ಹಾರಿಸಿದ್ದು ಡ್ರೋನಾ? ಅಥವಾ ಕಾಗೆನಾ? ಡ್ರೋನ್ ಪ್ರತಾಪ್ ನಿಜಕ್ಕೂ ವಿದೇಶಕ್ಕೆ ಹೋಗಿದ್ರಾ ? ಅಲ್ಲಿ ಹೋಗಲು ಅವರಿಗೆ ಪಾಸ್ಪೋರ್ಟ್ ವೀಸಾ ಇತ್ತಾ ? ಪಾಸ್ಪೋರ್ಟ್ ವೀಸಾ ಸಂಬಂಧ ಅವರು ತಮ್ಮ ದಾಖಲೆಗಳನ್ನು ಮಾಧ್ಯಮದ ಮುಂದೆ ತೋರಿಸಿದ್ರಾ? ಬಿಟಿವಿಯಲ್ಲಿ ನಡೆದ ವಿಶೇಷ ಸಂದರ್ಶನದಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ.
ಡ್ರೋನ್ ಪ್ರತಾಪ್ ಅವರನ್ನು ಯಂಗ್ ಸೈಂಟಿಸ್ಟ್ ಎಂದು 4 ದೇಶಗಳು ಗುರುತಿಸಿವೆ ಎಂದು ಸ್ವತಃ ಪ್ರತಾಪ್ ಅವರೇ ಹೇಳಿದ್ರು. ಜಪಾನ್ನಲ್ಲಿ ಗೆದ್ದಿರುವ ಪ್ರಮಾಣ ಪತ್ರವನ್ನ ಪ್ರತಾಪ್ ಬಹಿರಂಗ ಪಡಿಸಿದ್ರು, ಆದರೆ ಆ ಅಂತಾರಾಷ್ಟ್ರೀಯ ಮಟ್ಟದ ಪ್ರಮಾಣ ಪತ್ರದಲ್ಲಿ ವೆಹಿಕಲ್ ಸ್ಪೆಲ್ಲಿಂಗ್ ತಪ್ಪು ಇದ್ದುದು ನಿಜಕ್ಕೂ ಆಶ್ಚರ್ಯ. ಇದರ ಜತೆ ಜರ್ಮನಿಯಲ್ಲಿ ಪಡೆದಿದ್ದ ಸರ್ಟಿಫಿಕೇಟ್ ಕೂಡ ತೋರಿಸಿದ್ರು. ಆದರೆ, ನಾನು ಜಪಾನ್ಗೆ ಖಂಡಿತ ಹೋಗಿದ್ದೆ, ಅಲ್ಲಿಯ ವೀಸಾ ಪಾಸ್ಪೋರ್ಟ್ ಕಾಪಿ ಕೂಡ ನನ್ನ ಹತ್ತಿರ ಇದೆ. ಟೋಕಿಯೊದಲ್ಲಿ ನಡೆಯುವ ಎಲ್ಲ ಎಕ್ಸಿಬಿಷನ್ಗಳಲ್ಲಿ ನನ್ನ ಹೆಸರು ಕಾಣಲು ಸಾಧ್ಯ ಆಗಿಲ್ಲ. ಯಾಕಂದ್ರೆ ಅಲ್ಲಿ ಪ್ರತಿದಿನ ಅದೆಷ್ಟೋ ಪ್ರದರ್ಶನಗಳಿರುತ್ತವೆ. ನಾನು ನಮ್ಮ ಕಾಲೇಜು ಮತ್ತು ದೇಶವನ್ನು ಪ್ರತಿನಿಧಿಸಲು ವಿದ್ಯಾರ್ಥಿಯಾಗಿ ಹೋಗಿದ್ದೆ. ಅದೂ ಅಲ್ಲದೇ ನಾವು ಏನು ಸ್ಪೆಲ್ಲಿಂಗ್ ಕೊಡ್ತೀವೋ ಅದೇ ಸರ್ಟಿಫಿಕೇಟ್ನಲ್ಲಿ ಪ್ರಿಂಟ್ ಆಗುತ್ತೆ. ನಂಗೆ ಇಂಗ್ಲಿಷ್ ಕೊಡ ಸರಿಯಾಗಿ ಬರ್ತಿರ್ಲಿಲ್ಲ. ನಾನು ಮಾತಾಡೋದು ಬಟ್ಲರ್ ಇಂಗ್ಲಿಷ್ ಎಂದು ಪ್ರತಾಪ್ ಸಮಜಾಯಷಿ ನೀಡಿದ್ರು.
ಕೆಲವರು ನನ್ನ ಬಗ್ಗೆ ಇಲ್ಲ ಸಲ್ಲದ ಅವಹೇಳನ ಮಾಡಿದ್ರು. ನಾನು ಬೇಕೂ ಅಂತ ಬರ್ತಿಲ್ಲ, ಯಾವುದೇ ಪ್ರಶ್ನೆಗೆ ಉತ್ತರ ಕೊಡ್ತಿಲ್ಲ ಅಂತ ಟ್ರೋಲ್ ಮಾಡಿದ್ರು. ನಾನು ಸತ್ತು ಹೋಗಿದ್ದೇನೆ ಅಂತ ಅದೆಷ್ಟೋ ಜನ ಸುದ್ದಿ ಹಬ್ಬಿಸಿದ್ರು. ಆದರೆ ಇದು ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಏನು ಎಂಬುದು ನನಗೆ ಹೊತ್ತು. ನಾನು ಯಾರಿಗೂ ನನ್ನನ್ನು ಸಾಭೀತು ಮಾಡೊಕೊಳ್ಳುವ ಅವಶ್ಯಕತೆ ಇಲ್ಲ. ನನಗೆ ರಾಜ್ಯದ ಜನತೆ ಹಾಗೂ ಮಂಡ್ಯದ ಜನತೆಯ ಪ್ರೀತಿ ನನ್ನ ಮೇಲಿದೆ. ಅವರ ಪ್ರೀತಿಗೆ ಅವರ ಮೇಲಿರುವ ಅಭಿಮಾನಕ್ಕೆ ಇಲ್ಲಿಗೆ ಬಂದು ಕ್ಲಾರಿಫಿಕೇಶನ್ ಕೊಡ್ತಿದ್ದೇನೆ. ನಾನು ಸತ್ತು ಹೋಗಿದ್ದೇನೆ ಎಂಬ ವಿಚಾರವಾಗಿ ನನ್ನ ತಾಯಿ ಬಹಳ ಗಾಬರಿ ಆಗಿದ್ರು.
ಪ್ರತಾಪ್ ಕಾನೂನಾತ್ಮಕವಾಗಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಾಪ್, ನಾನು ನನಗೆ ಸಂಬಂಧಪಟ್ಟ ಲಾಯರ್ ಬಳಿ ನಾನು ಮಾತಾಡುತ್ತಿದ್ದೇನೆ. ಇದರ ಬಗ್ಗೆ ಏನು ಮಾತಾಡಬಹುದು ಎಂಬುದು ಕಾನೂನಾತ್ಮಕವಾಗಿ ನನಗೆ ಗೊತ್ತಿಲ್ಲ. ಈ ಪರಿಸ್ಥಿತಿಯಲ್ಲಿ ತಾಳ್ಮೆ ಬಹಳ ಮುಖ್ಯವಾಗುತ್ತದೆ ಎಂದು ಪ್ರತಾಪ್ ಉತ್ತರಿಸಿದರು.
ಇನ್ನು ಬಿಟಿವಿ ಸ್ಟುಡಿಯೊದಲ್ಲಿ ಅವರ ಪ್ರಮಾಣ ಪತ್ರಗಳನ್ನು ತೋರಿಸಿದ್ರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಲ್ಲಿ ನಡೆದ ಫೆಸ್ಟ್ನಲ್ಲಿ ಕ್ವಿಜ್ ಕಾರ್ಯಕ್ರಮದಲ್ಲಿ ಪ್ರತಾಪ್ ಪಡೆದಿರುವ ಸರ್ಟಿಫಿಕೇಟ್ ತೋರಿಸಿದರು. 2016ರಲ್ಲಿ ರಾಜ್ಯ ಸರ್ಕಾರ ಮತ್ತು ಜೆಎಸ್ಎಸ್ ಕಾಲೇಜಿನ ಜಂಟಿ ಆಯೋಗದಲ್ಲಿ ನಡೆದ ಸೈನ್ಸ್ ಎಕ್ಸಿಬಿಷನ್ನಲ್ಲಿ ಪಡೆದ ಪ್ರಮಾಣ ಪತ್ರವನ್ನು ಪ್ರತಾಪ್ ತೋರಿಸಿದರು.