ಇಸ್ಲಾಮಾಬಾದ್ : ಟೀ ಕಡಿಮೆ ಕುಡೀರಿ..ಹಣ ಉಳಿಸ್ಕೊಳ್ಳಿ.. ಇದು ಮಂತ್ರಿಯೊಬ್ಬರು ಜನರಿಗೆ ನೀಡಿರೋ ಸಲಹೆಯಾಗಿದೆ. ದಿನಕ್ಕೆ ಒಂದು ಅಥವಾ ಎರಡು ಕಪ್ ಟೀ ಸೇವನೆ ಮಾಡಬೇಕಂತೆ. ಹೌದಾ ಪಕ್ಕದ ಪಾಕಿಸ್ತಾನದಲ್ಲಿ ಇಂಥಾ ಪರಿಸ್ಥಿತಿ ಬಂದಿದೆ.
ಪಾಕಿಸ್ತಾನ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ್ದು, ತನ್ನ ದೇಶದ ಜನರಿಗೆ ದಿನದ ಖರ್ಚು ಕಡಿಮೆ ಮಾಡಿಕೊಳ್ಳಲು ಸಲಹೆ ನೀಡುತ್ತಿದೆ. ಪ್ರತಿದಿನ ಕುಡಿಯುವ ಟೀ ಪ್ರಮಾಣವನ್ನು ಕಡಿಮೆ ಮಾಡಿಕೊಳಳಿ ಅಂತಾ ಸಚಿವ ಅಶಾನ್ ಇಕ್ಬಾಲ್ ಸಲಹೆ ನೀಡಿದ್ದಾರೆ.
ಅಂದಹಾಗೆ ಪಾಕ್ನಲ್ಲಿ 2021-22ರಲ್ಲೇ 400 ಮಿಲಿಯನ್ ಅಂದರೆ 654 ಕೋಟಿ ರೂಪಾಯಿ ಮೌಲ್ಯದ ಟೀ ಸೇವನೆ ಮಾಡಿದ್ದಾರಂತೆ. ಜನರ ಅಗತ್ಯ ಪೂರೈಸಲು ಇಡೀ ಜಗತ್ತಿನಿಂದ ಪಾಕಿಸ್ತಾನ ಟೀ ಪೌಡರ್ ಆಮದು ಮಾಡಿಕೊಳ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಪಾಕಿಸ್ತಾನ ಹೆಚ್ಚುವರಿಯಾಗಿ 80 ಮಿಲಿಯನ್ ಅಂದರೆ 101 ಕೋಟಿ ಮೊತ್ತದ ಟೀ ಆಮದು ಮಾಡಿಕೊಂಡಿದೆ. ಆಮದು ಹೊರೆ ತಗ್ಗಿಸಿಕೊಳ್ಳಲು ಟೀ ಸೇವನೆ ಕಡಿಮೆ ಮಾಡಿ ಎಂದಿರೋ ಮಂತ್ರಿ ವಿರುದ್ಧ ಪಾಕ್ನಲ್ಲಿ ಆಕ್ರೋಶ ಎದುರಾಗಿದೆ.
ಇದನ್ನೂ ಓದಿ : ಕೋವಿಡ್ ಹೆಚ್ಚಳಕ್ಕೆ ಕಾಂಗ್ರೆಸ್ ಕಾರಣವಾಗ್ತಿದೆ..! ಕೊರೋನಾ ಜಾಸ್ತಿಯಾದ್ರೆ ಕಾಂಗ್ರೆಸ್ ಹೊಣೆ ಹೊರಬೇಕು : ಡಾ.ಸುಧಾಕರ್…