ಬೆಂಗಳೂರು: ಎಷ್ಟೋ ಭಾರಿ ಪ್ರೇಮಿಗಳು ಪ್ರೀತಿಯನ್ನು ಹೇಳಿಕೊಳ್ಳಲಾಗದೇ ಭಯದಿಂದ ಸುಮ್ಮನಿರುತ್ತಾರೆ. ಅಥವಾ ಪ್ರೀತಿ ಹೇಳಿಕೊಂಡಿದ್ದ ವ್ಯಕ್ತಿಗೆ ಅವರ ಪ್ರಿಯಕರ ಅಥವಾ ಪ್ರಿಯತಮೆ ಸ್ಪಂದಿಸಿರುವುದಿಲ್ಲ. ಇಂತಹ ಸಂರ್ಭದಲ್ಲಿ ನೀವು ಪ್ರೀತಿಸಿದವರನ್ನ ನಿಮ್ಮ ಬಲೆಯಲ್ಲಿ ಬೀಳಿಸಿಕೊಳ್ಳಬೇಕಂದ್ರೆ ಈ ಸ್ಟೋರಿ ಓದಿ…ಪ್ರೀತಿ ಎಂಬುದು ಮಾನವನ ಅಂತರಾಳದ ಸಹಜ ಪ್ರಕ್ರಿಯೆ. ಇದು ಎರಡು ಮನಸ್ಸುಗಳ ವಿಷಯ. ಅದನ್ನ ಜೋಪಾನ ಮಾಡುವುದು ಒಂದು ಕಲೆ. ಕೆಲವರ ಪ್ರೀತಿ ಸಕ್ಸಸ್ ಆಗುತ್ತೆ. ಇನ್ನೂ ಕೆಲವರ ಪ್ರೀತಿ ಸಕ್ಸಸ್ ಆಗುವುದಿಲ್ಲ. ಹಾಗಾದ್ರೆ ನೀವು ಪ್ರೀತಿಸುವವರು ನಿಮ್ಮಂತೆ ಆಗಲು ನೀವು ಕೆಲ ವಿಷಯಗಳನ್ನ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕ್ಲಿನಿಕಲ್ ಸೈಕಾಲಜಿಸ್ಟ್ ಪ್ರೀತಿಯಲ್ಲಿ ಒಬ್ಬರನ್ನು ಬೀಳಿಸಿಕೊಳ್ಳುವುದು ಹೇಗೆ ಹಾಗೂ ಒಬ್ಬರು ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳ ಬಗ್ಗೆ ಆಕರ್ಷಣೆ, ಕಾಮ ಮತ್ತು ಬಾಂಧವ್ಯವನ್ನು ತಮ್ಮದೇ ಆದ ರೀತಿಯಲ್ಲಿ ಪ್ರತಿಪಾದನೆ ಮಾಡಿದ್ದಾರೆ.
ಕೆಲವೊಮ್ಮೆ ನಾವು ಒಂದು ವಿಷಯದಲ್ಲಿ ಸಕ್ಸಸ್ ಆಗುತ್ತಿಲ್ಲ ಎಂದಾಗ ಅದರ ಬಗ್ಗೆ ಅರಿತವರ ಅಥವಾ ತಜ್ಞರ ಮಾತು, ಮಾರ್ಗ, ಸಲಹೆಗಳನ್ನ ಅನುಕರಿಸಬೇಕಾಗುತ್ತದೆ. ಹಾಗೆಯೇ ಹಲವು ತಜ್ಞರು ಒಬ್ಬರನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುವುದು ಹೇಗೆ ಎಂಬುದಕ್ಕೆ ಸಲಹೆಗಳನ್ನ ಕೊಟ್ಟಿದ್ದಾರೆ. ಅವುಗಳೆಂದರೆ…
- ಮೊದಲನೆಯದಾಗಿ, ಇಬ್ಬರ ಸಂಬಂಧವೂ ಪ್ರೀತಿಯಾಗಿ ಗಟ್ಟಿಗೊಳ್ಳಬೇಕೆಂದರೆ ಇಬ್ಬರ ಮಧ್ಯೆ ಹೆಚ್ಚಿನ ಆತ್ಮೀಯತೆಯನ್ನು ಹೆಚ್ಚಿಸಿಕೊಳ್ಳಬೇಕು.
- ಎರಡನೆಯದಾಗಿ ದೇಹ ಭಾಷೆ. ಸೈಕಾಲಜಿ ಪ್ರಕಾರ ದೇಹ ಭಾಷೆ ಒಬ್ಬರ ಪ್ರೀತಿಯನ್ನು ವ್ಯಕ್ತಪಡಿಸಲು ಅಥವಾ ಆ ವ್ಯಕ್ತಿ ಇವರ ಜೊತೆ ಪ್ರೀತಿಯಲ್ಲಿ ಬೀಳಲು ಸಹಕಾರಿಯಾಗಿದೆ.
- ಮೂರನೆಯದಾಗಿ ನೀವು ಪ್ರೀತಿಸುವಂತಹ ವ್ಯಕ್ತಿಯ ಇಷ್ಟದಂತೆ ಅವರಿಗೆ ಆರಾಮೆನಿಸುವ ವಲಯದಲ್ಲಿ ನೀವಿಬ್ಬರೂ ಸಹ ಸಮಯ ಕಳೆಯಿರಿ. ಹೀಗೆ ನಿಮ್ಮ ಆರಾಮ ವಲಯಗಳನ್ನು ಒಟ್ಟಿಗೆ ಆನಂದಿಸುವುದರಿಂದ ಇಬ್ಬರಲ್ಲೂ ಆತ್ಮೀಯತೆ ಹೆಚ್ಚಾಗಿ ಪ್ರೀತಿ ಮೂಡಲು ಕಾರಣವಾಗುತ್ತೆ.
- ನಾಲ್ಕನೆಯದಾಗಿ ಯಾವುದೇ ಕಾರಣಕ್ಕೂ ನಿಮ್ಮ ಪ್ರೀತಿಪಾತ್ರರನ್ನು ಪ್ರೀತಿಯಲ್ಲಿ ಬೀಳಿಸಿಕೊಳ್ಳುವ ಭರದಲ್ಲಿ ನಿಮ್ಮತನವನ್ನ ಕಳೆದುಕೊಳ್ಳಬಾರದು. ಏಕೆಂದರೆ ಆಗ ನೀವೇನೇ ಪ್ರೀತಿ ತೋರಿಸಿದರೂ ಕಪಟತನವೆಂಬುದು ಕಾಣುತ್ತಿರುತ್ತದೆ.
- ಐದನೆಯದಾಗಿ ಒಬ್ಬರ ಮೇಲೆ ಪ್ರೀತಿಯಾಗಿದೆ ಎಂದರೆ ಕಾಳಜಿ ಅಲ್ಲಿ ಇದ್ದೇ ಇರುತ್ತದೆ. ಹಾಗಾಗಿ ನೀವು ಪ್ರೀತಿಸುವವರ ಮೇಲೆ ಕಾಳಜಿ ಇದ್ದಲ್ಲಿ ಅವರು ನಿಮ್ಮೊಂದಿಗೆ ಪ್ರೀತಿಯಲ್ಲಿ ತೊಡಗಲು ನಿಮ್ಮ ಕಾಳಜಿ ಅನುವು ಮಾಡಿಕೊಡುತ್ತದೆ.
- ಆರನೆಯದಾಗಿ ಇದು ಪ್ರಮುಖವಾದ ಅಂಶ ಪ್ರೀತಿಯಲ್ಲಿ ಒಬ್ಬರ ಮನಸ್ಸನ್ನು, ಆಸೆಗಳನ್ನು, ಕನಸುಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ಹೀಗಾಗಿ ಒಬ್ಬರನ್ನು ನಿಮ್ಮ ಪ್ರೀತಿ ತೆಕ್ಕೆಯಲ್ಲಿ ಬೀಳಿಸಿಕೊಳ್ಳಬೇಕಾದಲ್ಲಿ ಪ್ರೀತಿಸುತ್ತಿರುವವರ ಅಗತ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ.
- ಏಳನೆಯದಾಗಿ ಬಲವಂತಾಗಿ ಪ್ರೀತಿಸಲು ಹೋಗಬೇಡಿ ಏಕೆಂದರೆ ಬಲವಂತದ ಪ್ರೀತಿ ಹೆಚ್ಚು ದಿನ ಉಳಿಯುವುದಿಲ್ಲ. ಈ ಕಾರಣದಿಂದ ನೀವು ನಿಮ್ಮ ಪ್ರೀತಿಪಾತ್ರರಿಗೆ ನನ್ನನ್ನ ಪ್ರೀತಿಸಲೇಬೇಕು ಎಂದು ಒತ್ತಾಯ ಮಾಡಬೇಡಿ. ಇದರಿಂದ ಒಂದಲ್ಲ ಒಂದು ದಿನ ನಿಮ್ಮ ಮೇಲೆ ಅವರಿಗೆ ಪ್ರೀತಿ ಮೂಡಬಹುದು.
- ಎಂಟನೆಯದಾಗಿ ತಾಳ್ಮೆ. ತಾಳ್ಮೆ ಎಂಬುದು ಮನುಷ್ಯನ ಜೀವನದಲ್ಲಿ ತುಂಬಾ ಪ್ರಭಾವ ಬೀರುತ್ತದೆ. ಅಲ್ಲದೆ, ತಾಳ್ಮೆ ಇದ್ದಲ್ಲಿ ಮನುಷ್ಯ ಎಲ್ಲವನ್ನೂ ಗೆಲ್ಲಬಹುದು. ಇನ್ನೂ ಈ ಪ್ರೀತಿ ಯಾವ ಲೆಕ್ಕ.
ಒಟ್ಟಾರೆ ಪ್ರೀತಿಸುವ ವ್ಯಕ್ತಿಯನ್ನು ಮೆಚ್ಚಿಸಲು, ಪ್ರೀತಿಯಲ್ಲಿ ಬೀಳುವಂತೆ ಮಾಡಲು ಈ ಮೇಲಿನ ಎಂಟು ಸಲಹೆಗಳು ಸಹಕಾರಿಯಾಗಿವೆ.
ಇದನ್ನೂ ಓದಿ : ಯತ್ನಾಳ್-ನಿರಾಣಿ ಮಧ್ಯ ತಾರಕಕ್ಕೇರಿದ ಸಿಡಿ ಬಡಿದಾಟ… ಪಿಂಪ್ ಮಂತ್ರಿ ಎಂದು ನಿರಾಣಿ ಕಾಲೆಳೆದ ಬಸನಗೌಡ ಯತ್ನಾಳ್…!