ಬೆಂಗಳೂರು : ಕಿರಿಕ್ ಪಾರ್ಟಿ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಬ್ಯಾನ್ ಮಾಡುವ ಕುರಿತು ಡಾಲಿ ಧನಂಜಯ ಪ್ರತಿಕ್ರೀಯಿಸಿದ್ದಾರೆ. ರಶ್ಮಿಕಾ ಕನ್ನಡದ ಹುಡುಗಿ, ಯಾಕೆ ಬ್ಯಾನ್ ಮಾಡಬೇಕು ಎಂದು ನಟ ನಟರಾಕ್ಷಸ ಪ್ರಶ್ನಿಸಿದ್ದಾರೆ.
ನಟಿ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಎಂಬ ಪಾತ್ರದಿಂದ ಜನಪ್ರಿಯತೆ ಹೊಂದಿದ್ದರು. ಈಗ ಬಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಸಂದರ್ಶನವೊಂದರಲ್ಲಿ ಚೊಚ್ಚಲ ಚಿತ್ರದ ನಿರ್ಮಾಣ ಸಂಸ್ಥೆಯ ಹೆಸರನ್ನ ಹೇಳಿಲ್ಲ ಎಂಬ ಕಾರಣಕ್ಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಕಾರಣದಿಂದಾಗಿ ರಶ್ಮಿಕಾರನ್ನ ಕನ್ನಡ ಚಿತ್ರರಂಗದಲ್ಲಿ ಬ್ಯಾನ್ ಮಾಡಲೇಬೇಕು ಎಂಬ ಕೂಗು ಕೇಳಿ ಬಂದಿತ್ತು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬ್ಯಾನ್ ಎಂಬ ಅಭಿಯಾನ ಕೂಡ ಆಗಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಡಾಲಿ ಪ್ರಶ್ನಿಸಿದ್ದಾರೆ.
ಚಿತ್ರರಂಗದಲ್ಲಿ ಎಲ್ಲರಿಗೂ ಅವರದ್ದೇ ಆದ ಬದುಕಿದೆ. ಸಿನಿಮಾರಂಗ ಎಲ್ಲರಿಗೂ ಓಪನ್ ಆಗಿದೆ. ಯಾರು ಯಾರನ್ನು ಇಲ್ಲಿ ಬರಬೇಡಿ ಎಂದು ಹೇಳೋದಕ್ಕೆ ಆಗಲ್ಲ. ಸಣ್ಣ ಪುಟ್ಟ ತಪ್ಪಾಯ್ತು ಅಂದಾಕ್ಷಣ ಮನೆ ಮಕ್ಕಳನ್ನ ಮನೆಯಿಂದ ಹೊರಗೆ ಹಾಕ್ತೀರಾ? ಇಲ್ಲವಲ್ಲಾ, ಆ ಜೀವನೂ ಅಷ್ಟೇ ಅವರು ಎಲ್ಲಿದ್ದರೂ ಕೂಡ ಕನ್ನಡದ ಹುಡುಗಿನೇ ಎಂದು ಕಿರಿಕ್ ಬೆಡಗಿ ರಶ್ಮಿಕಾ ಪರವಾಗಿ ಡಾಲಿ ಧನಂಜಯ್ ಖಡಕ್ ಶೈಲಿಯಲ್ಲಿ ಉತ್ತರಿಸಿದ್ದಾರೆ. ಅಲ್ಲದೆ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಬೆಳೆದಿರುವ ಬಗ್ಗೆ ಧನಂಜಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಾಲಿ, ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾ ಆದಂತಹ `ಪುಷ್ಪ’ ಚಿತ್ರದಲ್ಲಿ ಜೊತೆ ನಟಿಸಿದ್ದು. ಇದೀಗ `ಪುಷ್ಪ 2’ನಲ್ಲೂ ಡಾಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಗುಜರಾತ್ ಎಲೆಕ್ಷನ್ ಫಲಿತಾಂಶ ಹೊರಬೀಳುತ್ತಿದ್ದಂತೆ ಉಲ್ಟಾ ಹೊಡೆದ ಬಾಬುರಾವ ಚಿಂಚನಸೂರ…!