ಬೆಂಗಳೂರು : ಸಿಟಿ ಮಾರ್ಕೆಟ್ ಫ್ಲೈ ಓವರ್ ನಿಂದ ಹಣ ಎಸೆದ ಪ್ರಕರಣ ಪೊಲೀಸ್ ವಿಚಾರಣೆ ವೇಳೆ ಸ್ಪೋಟಕ ವಿಚಾರ ಬಾಯ್ಬಿಟ್ಟಿದ್ದಾನೆ.
ದೊಡ್ಡ ಬಿಲ್ಡಪ್ ಕೊಟ್ಟು ಅರುಣ ಎಸೆದಿದ್ದು ಎಷ್ಟು ಹಣ ಗೊತ್ತ…! ಪೊಲೀಸರ ಸ್ಟೈಲ್ ನಲ್ಲಿ ವಿಚಾರಿಸಿದ್ದಾಗ ಏನಂತ ಬಾಯ್ಬಿಟ್ಟಿದ್ದಾನೆ ಗೊತ್ತಾ! ಎನ್ ಕ್ಯೂರಿ ಟೈಂನಲ್ಲಿ ಇವನು ಕೊಟ್ಟ ಡಿಟೈಲ್ಸ್ ಕೇಳಿ ಪೊಲೀಸರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ನಿನ್ನೆ ಫ್ಲೈ ಓವರ್ ಮೇಲಿಂದ ಬಿಲ್ಡ್ ಅಪ್ ಅರುಣ ಎಸೆದಿದ್ದು ಜಸ್ಟ್ 3700 ರೂಪಾಯಿಯಾಗಿದ್ದು, 10,20,50 ನೋಟುಗಳನ್ನು ಎಸೆದು ಬಿಲ್ಡ್ ಅಪ್ ಕೊಟ್ಟಿದ್ದಾನೆ. ಪಿಗ್ಮೀ ಕಲೇಕ್ಟ್ ಮಾಡೋ ವ್ಯಕ್ತಿಯಿಂದ 4 ಸಾವಿರ ಹಣ ಕೊಟ್ಟು 3700 ಚಿಲ್ಲರೆ ಪಡೆದುಕೊಂಡಿದ್ದ. ಚಿಲ್ಲರೆ ಹಣ ಕೊಟ್ಟ ಪಿಗ್ಮೀ ಕಲೇಕ್ಟರ್ ಗೆ 300 ಟಿಪ್ಸ್ ಕೊಟ್ನಂತೆ..! ಒಂದು ಬ್ಯಾಗ್ ನಲ್ಲಿ 3700 ರುಪಾಯಿ ಚಿಲ್ಲರೆ ಹಣ ಹಾಕೊಂಡು ಬಂದು ಫ್ಲೈ ಓವರ್ ಮೇಲಿಂದ ಹಣ ಎಸೆದಿದ್ದಾನೆ. ಹಣ ಎಸೆದು ಬಿಲ್ಡ್ ಅಪ್ ಕೊಟ್ಟು ಪೊಲೀಸ್ ಸ್ಟೇಷನ್ ಸೇರಿದ್ದು, ಚಿಲ್ಲರೆ ಹಣ ಎಸೆದಿದ್ದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡೋ ಪ್ಲಾನ್ ಮಾಡಿದ್ದಾನೆ. ವಿಡಿಯೋ ವೈರಲ್ ಮಾಡೋಕೆ ಹೋದವನು ಕೇಸ್ ಹಾಕಿಸಿಕೊಂಡು ಥಂಡ ಹೊಡೆದಿದ್ದು, ಇವನ ಬಿಲ್ಡ್ ಅಪ್ ಸ್ಟೋರಿ ಕೇಳಿ ಪೊಲೀಸರು ನಕ್ಕು ನಕ್ಕು ಸುಸ್ತಾಗಿದ್ದಾರೆ.
ಇದನ್ನೂ ಓದಿ : ಈ ಬಾರಿ ಟ್ರಯಲ್ ನೋಡಲ್ಲ.. 4-5 ಕ್ಷೇತ್ರ ಗೆದ್ದೇ ಗೆಲ್ತೀವಿ : ಸಚಿವ ಆರ್ ಅಶೋಕ್….