ಅತ್ತ ರಾಜ್ಯ ಸರ್ಕಾರವು ಕೊರೋನಾ ಸಂಕಷ್ಟ ದಾಟಲು ಎಲ್ಲ ರೀತಿಯ ಸರ್ಕಸ್ ಮಾಡ್ತಿದೆ. ಇತ್ತ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ರಾಜಕೀಯವಾಗಿ ಪುಟಿದೇಳಲು ತಾನೂ ಸರ್ಕಸ್ ಮಾಡ್ತಿದೆ. ಕೊರೋನಾ ಬಗ್ಗೆ ಜಾಗೃತಿ ಮೂಡಿಸಿಕೊಂಡೇ ಪಕ್ಷ ಸಂಘಟಿಸಲು ಅಧ್ಯಕ್ಷ ಡಿಕೆ ಶಿವಕುಮಾರ್ ಸತತ ಪರಿಶ್ರಮ ಹಾಕ್ತಿದ್ದಾರೆ.
ಮಂಗಳವಾರ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸರಣಿ ಸಭೆಗಳು ನಡೆದ್ವು. ಪಕ್ಷದ ಮೀಡಿಯಾ ಸೆಲ್ ಗಳ ಜೊತೆಗೆ ಮೀಟಿಂಗ್ ನಡೆಸಿದ ಮುಖಂಡರುಗಳು, ಕೊರೊನ ಸಂದರ್ಭದಲ್ಲಿ ಜನರಿಗೆ ಹೇಗೆ ಜಾಗೃತಿ ಮೂಡಿಸುವುದು ಮತ್ತು ಸರ್ಕಾರದ ವೈಫಲ್ಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ತಲುಪಿಸುವುದು ಹೇಗೆ ಎಂಬ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ರು.
ಇದೇ ವೇಳೆ ಮಧ್ಯಾನ್ಹ ಕಾಂಗ್ರೆಸ್ ಹಿರಿಯ ನಾಯಕರ ಜೊತೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ
ಅಧ್ಯಕ್ಷ ಡಿಕೆ ಶಿವಕುಮಾರ, ರಾಜ್ಯ ಸರ್ಕಾರದ ವಿರುದ್ದ ರಣತಂತ್ರದ ತಯಾರಿಯಲ್ಲಿ ತೊಡಗಿದ್ರು.
ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಸರ್ಕಾರ ದುಪ್ಪಟ್ಟು ಹಣಕ್ಕೆ ಖರೀದಿ ಮಾಡಿರುವ ಸಂಬಂಧ
ಹಗರಣದ ವಾಸನೆ ಬರುತ್ತಿದ್ದು ಅದನ್ನು ಜನರಿಗೆ ಅರ್ಥ ಮಾಡಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ಮಾಡಿದ್ರು.
ಜೊತೆಗೆ ಈ ಕೊರೊನ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಯಾವ ರೀತಿಯಲ್ಲಿ ಹೋರಾಟ ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡಿದ್ರು.
ಸಂಜೆ ವೇಳೆಗೆ ಬೆಂಗಳೂರು ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ಶಾಸಕರ ಸಭೆ ಕರೆದು ಚರ್ಚೆ ನಡೆಸಿದ್ರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ,ಕೃಷ್ಣಭೈರೇಗೌಡ, ಯು.ಟಿ.ಖಾದರ್,ಪ್ರಿಯಾಂಕ ಖರ್ಗೆ,ದಿನೇಶ್ ಗುಂಡುರಾವ್
ಸಂಸದ ಡಿ.ಕೆ.ಸುರೇಶ್, ಸೌಮ್ಯಾರೆಡ್ಡಿ, ಹ್ಯಾರೀಸ್,ನಾರಾಯಣಸ್ವಾಮಿ ಸೇರಿ ಹಲವರು ಭಾಗಿಯಾಗಿದ್ರು.
ಲಾಕ್ ಡೌನ್ ನಿಂದಾಗಿ ಜನಸಾಮಾನ್ಯರಿಗೆ ಸಂಕಷ್ಡ ಎದುರಾಗಲಿದ್ದು, ಬಡವರ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ನಿರ್ಧಾರ ಮಾಡಲಾಯಿತು. ಜೊತೆಗೆ ಈ ಅವಧಿಯಲ್ಲಿ ಉದ್ಬವಿಸಬಹುದಾದ ಸಮಸ್ಯೆ ಮತ್ತು ಸರ್ಕಾರದ ಲೋಪದೋಷಗಳನ್ನ ಎತ್ತಿ ಹಿಡಿಯುವುದು.
ವೈದ್ಯಕೀಯ ಪರಿಕರಗಳ ಖರೀದಿ ಅಕ್ರಮದ ವಿರುದ್ಧ ಹೋರಾಟ ನಡೆಸುವ ಬಗ್ಗೆಯೂ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಬಳಿಕ ಮಾಡಿದ ಅದ್ಯಕ್ಷ ಡಿಕೆ ಶಿವಕುಮಾರ್, ಕೊರೊನಾ ಸಂದರ್ಭದಲ್ಲಿ ಅನೇಕ ಭ್ರಷ್ಟಾಚಾರ ನಡೆದಿದೆ.
ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ಆಗಿದೆ.
ಈಗ 10,000 ಬೆಡ್ ಬಾಡಿಗೆ ಪಡೆಯೋದ್ರಲ್ಲಿ ಹಗರಣ ಆಗಿದೆ. ಹಾಸಿಗೆ ,ದಿಂಬು ನಲ್ಲಿ ಹಗರಣ ಮಾಡಿದ್ದಾರೆ.
ಸರ್ಕಾರದಲ್ಲಿ ನಡೆದಿರುವ ಹಗರಣದ ಬಗ್ಹೆ ಇದಕ್ಕಿಂತ ಸಾಕ್ಷಿ ಬೇಕೇ? ಅಂತಾ ವಾಗ್ದಾಳಿ ನಡೆಸಿದರು. ಒಟ್ಟಾರೆಯಾಗಿ ಕಾಂಗ್ರೆಸ್ ಕೊರಾನಾ ಕಾಲದಲ್ಲಿ ಯಶಸ್ವಿಯಾಗಿ ಹೆಜ್ಜೆ ಹಾಕ್ತಿರೋದಂತೂ ಸತ್ಯ.