ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ದಿಢೀರನೆ ಪಿಪಿಇ ಕಿಟ್ ಸಮೇತ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿಳಿದರು. ಕರ್ನಾಟಕ ಸರ್ಕಾರದ ಯಾವ ಸಚಿವರೂ ಈವರೆಗೂ ಕೊರೋನಾ ಸೋಂಕಿತರನ್ನು ಭೇಟಿ ಮಾಡುವ ದೈರ್ಯ ಮಾಡಿರಲಿಲ್ಲ. ಡಿ ಕೆ ಶಿವಕುಮಾರ್ ಪಿಪಿಇ ಕಿಟ್ ಸಮೇತ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಅವಕ್ಕಾದರು.
ಡಿ ಕೆ ಶಿವಕುಮಾರ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿರೋ ಕೊರೋನಾ ಸೋಂಕಿತರ ಅಹವಾಲು ಕೇಳಲು ಬಂದಿದ್ದು, ನಿಯಮಗಳ ಪ್ರಕಾರ ಅವರಿಗೆ ಅವಕಾಶ ನಿರಾಕರಿಸಲಾಯ್ತು. ನಿನ್ನೆ ರಾಮನಗರದಲ್ಲಿ ಸಂಸದ ಡಿ ಕೆ ಸುರೇಶ್ ಪಿಪಿಇ ಕಿಟ್ ಸಮೇತ ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದರು. ಅದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇಂದು ಡಿ ಕೆ ಶಿವಕುಮಾರ್ ವಿಕ್ಟೋರಿಯಾ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಲು ನಿರ್ಧರಿಸಿದ್ದರು. ಆದರೆ ಅಧಿಕಾರಿಗಳು ಭೇಟಿಗೆ ಅವಕಾಶ ನಿರಾಕರಿಸಿ ವಿಡಿಯೋ ಕಾನ್ಫರೆನ್ಸ್ ಗೆ ಅವಕಾಶ ಮಾಡಿಕೊಟ್ಟರು.
ಡಿ ಕೆ ಶಿವಕುಮಾರ್ರವರು ವಿಕ್ಟೋರಿಯಾ ಆವರಣದಲ್ಲಿ ಕೊರೋನಾ ಸೋಂಕಿತರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ರು. ಬಳಿಕ ವೈದ್ಯರ ಜೊತೆ ಸರ್ಕಾರ ಸವಲತ್ತುಗಳ ಬಗ್ಗೆ ಚರ್ಚೆ ನಡೆಸಿದ್ರು. ರೋಗಿಗಳಿಗೆ ವಿಡಿಯೋ ಕಾನ್ಫರೆನ್ಸ್ನಲ್ಲೇ ದೈರ್ಯ ತುಂಬಿದ ಡಿ ಕೆ ಶಿವಕುಮಾರ್, ಕೊರೋನಾ ಗೆದ್ದು ಬನ್ನಿ ಎಂದು ಹಾರೈಸಿದ್ರು.