ವಿಜಯಪುರ: ಸಿಎಂ ಬದಲಾವಣೆ ವಿಚಾರ ಅವರ ಪಾರ್ಟಿ ವಿಚಾರ. ಮೊದಲಿನಿಂದಲೂ ಅವರಿಗೆ ಆಡಳಿತ ನಡೆಸುವುದಕ್ಕೆ ಬರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಪಟ್ಟಿದ್ಧಾರೆ.
ವಿಜಯಪುರದಲ್ಲಿ ಮುಂದಿನ ಸಿಎಂ ನಿರಾಣಿ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ ‘ರಾಜ್ಯದಲ್ಲಿ ಆಡಳಿತ ಕುಸಿತವಾಗಿದೆ, ಈ ಬಗ್ಗೆ ನಾವೇನು ಮಾತಾಡ್ತಿಲ್ಲ. ಭ್ರಷ್ಟಾಚಾರದ ವಿಚಾರ ನಾವು ಮಾತನಾಡಿಲ್ಲ. ಮೊದಲು ಮಾತನಾಡಿದ್ದೇ ಈಶ್ವರಪ್ಪನವರು ಮತ್ತು ವಿಶ್ವನಾಥ್. ಇಂಕಮ್ ಟ್ಯಾಕ್ಸ್ ರೇಡ್ ಗೆ ಹೋಗಿದ್ದಾಗ ಅವರಿಗೆ ಮಾಹಿತಿ ಸಿಕ್ಕಿದೆ. ಕೆಲವು ಡೈರಿ, ದಾಖಲೆ ಯನ್ನು ಗೌಪ್ಯವಾಗಿ ಇಟ್ಟುಕೊಂಡು ಅದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇನ್ನು ಸಿಎಂ ಬದಲಾವಣೆ ವಿಚಾರ ಅವರ ಪಾರ್ಟಿ ವಿಚಾರ, ಮೊದಲಿನಿಂದಲೂ ಅವರಿಗೆ ಆಡಳಿತ ನಡೆಸೋಕೆ ಬರೋದಿಲ್ಲ. ಆದರೆ ಅವರಿಗೆ ಅಧಿಕಾರ ದಾಹ ಇದೆ. ಒಬ್ಬರಿಗಿಂತ ಒಬ್ಬರಿಗೆ ಜಾಸ್ತಿ ಇದೆ. ಆಡಳಿತ ಯಂತ್ರ ಗೊತ್ತಿಲ್ಲ, ಜನರ ನೋವು ಗೊತ್ತಿಲ್ಲ ಅವರಿಗೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ… ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ… ಮುರುಗೇಶ್ ನಿರಾಣಿ ಸ್ಪಷ್ಟನೆ…
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಯಾಕೆ ಇಟ್ಟುಕೊಂಡು ಕೂತಿದಾರೋ ಗೊತ್ತಿಲ್ಲ. ಮಂತ್ರಿಗಳ ವಿಶ್ವಾಸ ಇಲ್ಲದ ಮೇಲೆ ಆ ಜಾಗದಲ್ಲಿ ಅವರು ಇರಬಾರದು. ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಲ್ಲ ಎಂದಾಗ ಅವರು ರಾಜೀನಾಮೆ ನೀಡಿದ್ದರು. ಈಗ ಬೊಮ್ಮಾಯಿ ಅವರ ಮೇಲೂ ವಿಶ್ವಾಸ ಇಲ್ಲ ಎಂದ ಮೇಲೆ ಅವರು ರಾಜೀನಾಮೆ ಕೊಟ್ಟು ಅವರ ಕೆಲಸ ನೋಡಬೇಕು ಎಂದು ಡಿಕೆಶಿ ತಿಳಿಸಿದ್ದಾರೆ.
ಇದನ್ನೂ ಓದಿ: ಮುರುಗೇಶ್ ನಿರಾಣಿ ಆದಷ್ಟು ಬೇಗ ಮುಖ್ಯಮಂತ್ರಿ ಆಗುತ್ತಾರೆ… ಕೆ.ಎಸ್. ಈಶ್ವರಪ್ಪ ಸ್ಫೋಟಕ ಹೇಳಿಕೆ…
ಇನ್ನು ಎಸ್ ಆರ್ ಪಾಟೀಲ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ಪಕ್ಷದ ಹಿರಿಯ ನಾಯಕರು. ಟಿಕೆಟ್ ಕೊಡುವ ಎಲ್ಲಾ ಅರ್ಹತೆ, ನಾಯಕತ್ವ ಇತ್ತು. ಅವರಿಗೆ ಟಿಕೆಟ್ ಕೊಡಬೇಕು ಎಂದುಕೊಂಡಿದ್ದೆವು. ಆದರೆ ದೂರದ ಆಲೋಚನೆಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬಡ್ಡಿ ಸಹಿತಿ ಅವರಿಗೆ ಎಲ್ಲಾ ಸಿಗಲಿದೆ. ಅವರಿಗೆ ಹೆಚ್ಚಿನ ಜವಾಬ್ದಾರಿ ಕೊಡಬೇಕು ಎಂಬ ಚಿಂತನೆ ಇದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.