ಉಡುಪಿ: ನಾನು ಮತ್ತು ಜಿ.ಟಿ. ದೇವೇಗೌಡ ಮಾತ್ರ ನನಗೆ ಲೆಕ್ಕ. ಎಸ್. ಟಿ. ಸೋಮಶೇಖರ್ ಅವರು ತಮ್ಮ ಪಕ್ಷದ ವಿಚಾರ ಹೇಳಿಕೊಂಡರೆ ಅದಕ್ಕೂ ನನಗೂ ಸಂಬಂಧ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಆಪರೇಶನ್ ಕಮಲ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು ನಾನು ಮತ್ತು ಜಿಟಿ ದೇವಗೌಡ ಮಾತ್ರ ನನಗೆ ಲೆಕ್ಕ, ಸೋಮಶೇಖರ್ ಉತ್ಸಾಹದಿಂದ ನಮ್ಮ ಪಕ್ಷದಿಂದ ಬಿಜೆಪಿಗೆ ಹೋಗಿದ್ದಾರೆ. ಅವರು ಪಕ್ಷದ ವಿಚಾರ ಹೇಳಿಕೊಂಡರೆ ಅದಕ್ಕೂ ನನಗೂ ಸಂಬಂಧ ಇಲ್ಲ. ಜಿಟಿ ದೇವೇಗೌಡ ಹಿಂದೆ ಏನು ಮಾತಾಡಿದ್ರು ಮುಂದೆ ಏನು ಮಾತಾಡ್ತಾರೆ ಕಾದು ನೋಡೋಣ. ಜಿಟಿ ದೇವೇಗೌಡ ಕುಟುಂಬದಲ್ಲಿ ಈಗಷ್ಟೇ ಅನ್ಯಾಯ ಆಗಿದೆ, ಅವರಿಗೆ ಧೈರ್ಯ ತುಂಬೋ ಕೆಲಸ ಮಾಡಬೇಕಿದೆ. ಈ ಸಂದರ್ಭದಲ್ಲಿ ರಾಜಕಾರಣ ಬೇಡ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಾನು ತಪ್ಪು ಮಾಡಿದ್ರೆ, ಆ ತಪ್ಪಿನ ಶಿಕ್ಷೆ ಅನುಭವಿಸಲು ಬದ್ದನಾಗಿದ್ದೇನೆ : ಡಿ. ಕೆ. ಶಿವಕುಮಾರ್…
ಪಾವಗಡ ಸೋಲಾರ್ ಹಗರಣ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ ‘ಆರೋಪದ ಕುರಿತು ಕಾದು ನೋಡೋಣ, ಪಾವಗಡ ಆದ್ರೂ ತೋರಿಸ್ಲೀ ಏನೂ ಬೇಕಾದ್ರೂ ತೋರಿಸ್ಲಿ, ಯಾವ ತನಿಖೆ ಬೇಕಾದ್ರೂ ಮಾಡಲಿ. ತಪ್ಪು ಮಾಡಿದ್ರೆ ಕತ್ತು ಕೊಡಕ್ಕೂ ನಾನು ತಯಾರಿದ್ದೇನೆ. ನಮ್ಮ ಸರ್ಕಾರ ಇರುವಾಗ ರಾಜ್ಯ ಹೇಗಿತ್ತು ಈಗ ಹೇಗಿದೆ? ನಮ್ಮ ಸರ್ಕಾರ ಇರುವಾಗ ಎಷ್ಟು ಪವರ್ ಜನರೇಟ್ ಮಾಡಿದ್ದೇವೆ, ಎಲ್ಲಾ ದಾಖಲೆ ನನ್ನಲ್ಲಿ ಇದೆ ಎಂದು ತಿಳಿಸಿದರು.
ರಮ್ಯಾ ಕುರಿತು ಸಾಫ್ಟ್ ಕಾರ್ನರ್ ವ್ಯಕ್ತಪಡಿಸಿದ ಡಿಕೆಶಿ, ನಮ್ಮ ಪಕ್ಷದ ಹೆಣ್ಮಗಳು ರಮ್ಯಾ ಆಕ್ಟಿವ್ ಆಗಿದ್ರೆ ಸಂತೋಷ, ಲೋಕಸಭಾ ಸದಸ್ಯೆಯಾಗಿ ಮಾಡಿದ್ವಿ , ಎರಡು ಬಾರಿ ಟಿಕೆಟ್ ಕೂಡ ಕೊಟ್ಡಿದ್ದೇವೆ ರಮ್ಯಾ ಅವರಿಗೆ ಒಳ್ಳೆದಾಗಲಿ ಎಂದು ತಿಳಿಸಿದರು.
ಇದನ್ನೂ ಓದಿ: ಉಪ್ಪುಂದ ದುರ್ಗಾಪರಮೇಶ್ವರಿ ದೇವಳದ ರಾಜಗೋಪುರ ಸಮರ್ಪಣಾ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಭಾಗಿ..