ಬೆಂಗಳೂರು: ಗುತ್ತಿಗೆದಾರರ ಪತ್ರ ತಲುಪಿದರೂ ಸಹ 40% ಕಮಿಷನ್ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೌನವಾಗಿರುವುದು ಏಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಡಿಕೆಶಿ ‘ಪರಿವರ್ತನಾ ಯಾತ್ರೆಯಲ್ಲಿ ಕಾಂಗ್ರೆಸ್ 10% ಕಮಿಷನ್ ಸರ್ಕಾರ ಅಂತ ಪ್ರಧಾನಿಗಳು ಬೊಬ್ಬೆ ಹಾಕಿದ್ದು ನಿಮಗೆ ನೆನಪಿದೆಯಲ್ವಾ? ಆದ್ರೀಗ ಅವರದೇ ಪಕ್ಷವನ್ನು 40% ಗುಮ್ಮ ಕಾಡುತ್ತಿದೆ. ಈ ಕಡುಭ್ರಷ್ಟಾಚಾರದ ವಿರುದ್ಧ ಮೌನವಾಗಿರುವುದೇಕೆ? ದೇಶದ ಅತಿದೊಡ್ಡ ಭ್ರಷ್ಟಸರ್ಕಾರವಿದು ಎಂಬುದು ಎಲ್ಲರಿಗೂ ತಿಳಿದಿದೆ.
2018ರ ಪರಿವರ್ತನಾ ಯಾತ್ರೆಯಲ್ಲಿ ಕಾಂಗ್ರೆಸ್ 10% ಕಮಿಷನ್ ಸರ್ಕಾರ ಅಂತ ಪ್ರಧಾನಿಗಳು ಬೊಬ್ಬೆ ಹಾಕಿದ್ದು ನಿಮಗೆ ನೆನಪಿದೆಯಲ್ವಾ? ಆದ್ರೀಗ ಅವರದೇ ಪಕ್ಷವನ್ನು 40% ಗುಮ್ಮ ಕಾಡುತ್ತಿದೆ. ಈ ಕಡುಭ್ರಷ್ಟಾಚಾರದ ವಿರುದ್ಧ ಮೌನವಾಗಿರುವುದೇಕೆ? ದೇಶದ ಅತಿದೊಡ್ಡ ಭ್ರಷ್ಟಸರ್ಕಾರವಿದು ಎಂಬುದು ಎಲ್ಲರಿಗೂ ತಿಳಿದಿದೆ.#40PercentSarkar
1/2
— DK Shivakumar (@DKShivakumar) November 22, 2021
ಬಿಜೆಪಿ ಭ್ರಷ್ಟರ ಸಾಮ್ರಾಜ್ಯ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ಬೇಲಿಯೇ ಎದ್ದು ಹೊಲ ಮೇಯ್ದಂತಿದೆ ರಾಜ್ಯದ ಪರಿಸ್ಥಿತಿ. ಗುತ್ತಿಗೆದಾರರ ಪತ್ರ ತಲುಪಿದರೂ 40% ಕಮಿಷನ್ ವಿಚಾರವಾಗಿ ಪ್ರಧಾನಿಯವರು ಮೌನವಾಗಿರುವುದೇಕೆ? ಘನ ಸ್ಥಾನದಲ್ಲಿದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ಮೌನವಾಗಿರುವುದು ಅಪರಾಧವಲ್ಲವೇ? ಎಂದು ಪ್ರಧಾನಿ ನಡೆಯನ್ನು ಪ್ರಶ್ನಿಸಿದ್ದಾರೆ.
ಬಿಜೆಪಿ ಭ್ರಷ್ಟರ ಸಾಮ್ರಾಜ್ಯ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ಬೇಲಿಯೇ ಎದ್ದು ಹೊಲ ಮೇಯ್ದಂತಿದೆ ರಾಜ್ಯದ ಪರಿಸ್ಥಿತಿ. ಗುತ್ತಿಗೆದಾರರ ಪತ್ರ ತಲುಪಿದರೂ 40% ಕಮಿಷನ್ ವಿಚಾರವಾಗಿ ಪ್ರಧಾನಿಯವರು ಮೌನವಾಗಿರುವುದೇಕೆ? ಘನ ಸ್ಥಾನದಲ್ಲಿದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ಮೌನವಾಗಿರುವುದು ಅಪರಾಧವಲ್ಲವೇ?#40PercentSarkar
2/2
— DK Shivakumar (@DKShivakumar) November 22, 2021