ಬೆಂಗಳೂರು: ಸಚಿವರು ಅವರ ಮಕ್ಕಳನ್ನು ಅಗ್ನಿಪಥ್ ಯೋಜನೆಯಲ್ಲಿ ಸೇನೆಗೆ ಸೇರಿಸಲಿ ನೋಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ಧಾರೆ.
ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿ ಕಾಲೇಜುಗಳಿಗೆ ರಜೆ ನೀಡಿರುವ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಕಾಲೇಜುಗಳಿಗೆ ಯಾಕೆ ರಜೆ ಕೊಡಬೇಕು? ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ? ರೋಡಲ್ಲಿ ಏನು ಸೆಕ್ಯೂರಿಟಿ ಕೊಡಬೇಕೋ ಕೊಡಿ. ರೋಡ್ ಶೋ ಮಾಡಿ ರಾಜಕೀಯ ಮಾಡಿ. ಆದರೆ ವಿದ್ಯಾರ್ಥಿ ಗಳನ್ನು ಯಾಕೆ ಅನುಮಾನದಿಂದ ನೋಡ್ತಿದ್ದೀರಾ? ನಮ್ಮ ವಿದ್ಯಾರ್ಥಿಗಳೇನು ಟೆರರಿಸ್ಟ್ ಗಳಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಟಾರೇ ಕಾಣದ ಬೆಂಗಳೂರು ರಸ್ತೆಗಳಿಗೆ ದಿಢೀರ್ ಟಾರ್ ಭಾಗ್ಯ… ಮೋದಿ ಸ್ವಾಗತಕ್ಕಾಗಿ ರಾತ್ರೋರಾತ್ರಿ ರಸ್ತೆಗಳಿಗೆ ಹೊಸ ಟಾರ್…
ಅಗ್ನಿಪಥ್ ಯೋಜನೆ ತಂದಿದ್ದೀರಾ ಆ ಮಕ್ಕಳು ಡಿಗ್ರಿ ಪಾಸ್ ಮಾಡಬಾರದಾ? ಇಷ್ಟು ವರ್ಷ ದೇಶವನ್ನು ಎಂತೆಂಥಾ ಸಂದರ್ಭಗಳಲ್ಲಿ ರಕ್ಷಣೆ ಮಾಡಿದ್ದಾರೆ. ಮಂತ್ರಿಗಳು ಅವರ ಮಕ್ಕಳನ್ನು ಅಗ್ನಿ ಪಥ್ ಯೋಜನೆಗೆ ಕಳಿಸಲಿ ನೋಡೋಣ. ಮಂತ್ರಿಗಳ ಮಕ್ಕಳು ಇಂಜಿನಿಯರ್ ಆಗಬೇಕು, ಡಾಕ್ಟರ್ ಆಗಬೇಕು. ಆದರೆ ಬಡವರ ಮಕ್ಕಳು ಮಾತ್ರ ಸೆಕ್ಯುರಿಟಿ ಗಾರ್ಡ್ಸ್ ಗಳಾಗಬೇಕಾ? ಮೋದಿ ಬರುತ್ತಿರುವುದು, ಜನಕ್ಕೆ ಅನುಕೂಲ ಅಲ್ಲ. ನಾಯಕರ ಅನುಕೂಲಕ್ಕೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.