ಬೆಂಗಳೂರು: ಯಾವ ವ್ಯಕ್ತಿ ಪೂಜೆಯೂ ಬೇಡ ಎಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದ ಡಿ.ಕೆ.ಶಿವಕುಮಾರ್ ಆನಂತರ ಟ್ವೀಟ್ ಮಾಡಿ, ತಮ್ಮ ವಿರೋಧವನ್ನು ಹೊರಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷದ ಬಗ್ಗೆ ನಿಷ್ಠೆ ಇರಲಿ.. ಅದುವೇ ದೊಡ್ಡ ಪೂಜೆ, ಉತ್ಸವ. ಆಗಸ್ಟ್ 15ರಂದು ಸ್ವತಂತ್ರ ಭಾರತದ 75ನೇ ಹುಟ್ಟುಹಬ್ಬ. ಇದರ ಅಂಗವಾಗಿ ನಡೆಯುವ ಯಾತ್ರೆಯಲ್ಲಿ ಪಾಲ್ಗೊಳ್ಳಿ. ನನಗಾಗಿ ಯಾವ ಉತ್ಸವ, ಹಬ್ಬ ಮಾಡುವುದು ಬೇಡ . ನನಗೆ ಅದರಲ್ಲಿ ಆಸಕ್ತಿಯೂ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ.. ಸಿದ್ದುಗೆ ಕೊನೆಗೂ ಕ್ಷೇತ್ರ ಹುಡುಕಿದ ರಮೇಶ್ ಕುಮಾರ್..!