ಸೌತ್ ನಟರ ವಿಚ್ಛೇದನೆ ಸುದ್ದಿಗಳು ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿದೆ. ಧನುಷ್ ನಂತರ ತಮಿಳಿನ ನಟ ವಿಜಯ್ ವಿಚ್ಛೇದನೆ ವಿಚಾರ ಮುನ್ನೆಲೆಗೆ ಬಂದಿದ್ದು, ಮೊದಲ ಪತ್ನಿಗೆ ಡಿವೋರ್ಸ್..? ಕೀರ್ತಿ ಸುರೇಶ್ ಜೊತೆ ದಳಪತಿ ವಿಜಯ್ 2ನೇ ಮದುವೆ..? ಎಂಬ ಸುದ್ದಿ ಹರಿದಾಡುತ್ತಿದೆ.
ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹಬ್ಬಿದ್ದು, ಈ ಜೋಡಿ ಮದುವೆಯಾಗಿ 23 ವರ್ಷಗಳಾಗಿದೆ. ಜೇಸನ್ ಎಂಬ ಮಗ ಮತ್ತು ದಿವ್ಯಾ ಎಂಬ ಮಗಳಿದ್ದಾರೆ.ವಿಜಯ್ ಮತ್ತು ಸಂಗೀತಾ ಅವರ ವಿಚ್ಛೇದನದ ಬಗ್ಗೆ ವದಂತಿಗಳು ಪ್ರಾರಂಭವಾಗಿದ್ದು ಅವರು ಬೇರೆಯಾಗಲು ಈಗಾಗಲೇ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸಾಮಾಜಿಕ ಜಾಲಾತಾಣದಲ್ಲಿ ಜಸ್ಟೀಸ್ ಫಾರ್ ಸಂಗೀತಾ ಎನ್ನುವ ಹ್ಯಾಷ್‌ಟ್ಯಾಗ್ ಕೂಡ ಟ್ರೆಂಡ್ ಆಗಿದ್ದು, ವಿಜಯ್ ಹಾಗೂ ಕೀರ್ತಿ ಸುರೇಶ್ ಒಟ್ಟಿಗೆ ಇರುವ ಫೋಟೊಗಳನ್ನು ಪೋಸ್ಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಅಟ್ಲಿ ಅವರ ಪತ್ನಿ ಪ್ರಿಯಾ ಅವರ ಬೇಬಿ ಶವರ್ ಮತ್ತು ವಾರಿಸು ಚಿತ್ರದ ಮ್ಯೂಸಿಕ್ ರಿಲೀಸ್ ಸಮಾರಂಭದಲ್ಲಿಯೂ ಸಂಗೀತಾ ಅವರು ಗೈರಾಗಿದ್ದನ್ನು ಅವರ ಕೆಲವು ಅಭಿಮಾನಿಗಳು ಗಮನಿಸಿದ್ದಾರೆ. ಹೀಗಾಗಿ ಇಬ್ಬರು ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನಲಾಗಿತ್ತು.
‘ಭೈರವ’ ಹಾಗೂ ‘ಸರ್ಕಾರ್’ ಸಿನಿಮಾಗಳಲ್ಲಿ ವಿಜಯ್ ಹಾಗೂ ಕೀರ್ತಿ ಸುರೇಶ್ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಒಳ್ಳೆ ಸ್ನೇಹವಿದೆ. ಅದು ಈಗ ಪ್ರೀತಿಯಾಗಿ ಬದಲಾಗಿದೆ, ಶೀಘ್ರದಲ್ಲೇ ಇಬ್ಬರು ಹಸೆಮಣೆ ಏರುತ್ತಾರೆ, ಅದಕ್ಕಾಗಿ ವಿಜಯ್ ಪತ್ನಿ ಸಂಗೀತಾಗೆ ಡಿವೋರ್ಸ್ ಕೊಡುತ್ತಾರೆ ಅಂತೆಲ್ಲಾ ಪ್ರಚಾರ ಆಗುತ್ತಿದೆ. ಮತ್ತೊಂದು ಕಡೆ ಕೀರ್ತಿ ಸುರೇಶ್‌ನ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.