ಕೆಜಿಫ್ ನಿರ್ದೇಶಕ ಪ್ರಶಾಂತ್ ನೀಲ್ಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್, ಸೌತ್ ಸಿನಿಮಾ ರಂಗ ಪ್ರಶಾಂತ್ಗಾಗಿ ಹಿಂದೆ ಬಿದ್ದಿದ್ದು., ಸಾಲು ಸಾಲು ಮೂವಿಗಳು ಪ್ರಶಾಂತ್ ಡೈರೆಕ್ಷನ್ ಬೇಕು ಅಂತ ಸಾಲುಗಟ್ಟಿ ನಿಂತಿವೆ. ಈ ಮೂವಿ ಮಾಸ್ಟರ್ಗೆ ಟಾಲಿವುಡ್ ನಿಂದ ಮತ್ತೊಂದು ಬುಲಾವ್ ಬಂದಿದೆ.
ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬಣ್ಣದ ಜಗತ್ತಿನ ಯಾವ್ ಮೂಲೆಗೆ ಹೋದ್ರು, ಪ್ರಶಾಂತ್ ಹೆಸರು ಕೇಳಿ ಬರುತ್ತೆ. ಇದೀಗ ಈ ಕೆಜಿಎಫ್ನ ಡೈರೆಕ್ಟರ್ ನೀಲ್ ಟಾಲಿವುಡ್ ಗೆ ಎಂಟ್ರಿ ಕೊಟ್ಟು ಹವಾ ಎಬ್ಬಿಸಿಸೋಕೆ ರೆಡಿಯಾಗಿದ್ದಾರೆ.
ಪ್ರಶಾಂತ್ ನೀಲ್ ಜ್ಯೂನಿಯರ್ ಎನ್ಟಿಆರ್ಗೆ ಆ್ಯಕ್ಷನ್ ಕಟ್ ಹೇಳೋ ಮೂಲಕ ಹೊಸ ಇತಿಹಾಸ ಬರೆಯಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿತ್ತು. ಆದ್ರೆ ಇದೀಗ ಟಿ-ಟೌನ್ನ ಮತ್ತೊಬ್ಬ ಸ್ಟಾರ್ ನಟನಿಗೆ, ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.
ಇದನ್ನೂ ಓದಿ : IPLಗೆ ಸಖತ್ ಕಿಕ್ ಕೊಡಲಿದೆ ಕಿಚ್ಚ-ರಚ್ಚು ಕಾಂಬೊ..!
ಸಿನಿಮಾ ಪ್ರೇಕ್ಷಕರನ್ನ ಎಡ್ಜ್ ಆಫ್ ಸೀಟ್ನಲ್ಲಿ ಕೂರಿಸೋ ತಾಕತ್ತಿರೋ ಪ್ರಶಾಂತ್ ನೀಲ್. ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಇದನ್ನೂ ಒದಿ : ಸಂಗೀತ ಕ್ಷೇತ್ರದ ದಿಗ್ಗಜ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ..! ಕೃತಕ ಉಸಿರಾಟದ ವ್ಯವಸ್ಥೆ ..! !
ಪ್ರಭಾಸ್ನ 22ನೇ ಸಿನಿಮಾ ಇದಾಗಲಿದ್ದು, ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆಯಂತೆ. ಭೂಗತ ಲೋಕದ ಮಾಫಿಯಾದ ಸುತ್ತ ಸುತ್ತುವ ಕಥೆಯಾಗಿದ್ದು, ಪ್ರಭಾಸ್ ಸಿನಿಮಾದಲ್ಲಿ ಸಾಮಾನ್ಯ ಜನರ ಹಕ್ಕುಗಳಿಗಾಗಿ ಹೋರಾಡುವ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.