ಬೆಂಗಳೂರು: ಬಿಎಂಟಿಸಿ ಬಸ್ಗಳಿಗೆ ಕಳೆದ ಮಾರ್ಚ್ ತಿಂಗಳಿಂದ ರಿಟೇಲ್ ವ್ಯಾಪಾರಿಗಳಿಂದ ಡೀಸೆಲ್ ಖರೀದಿ ಮಾಡಲಾಗುತ್ತಿದೆ. ಡೀಸೆಲ್ ಕೊರತೆಯ ಸಮಸ್ಯೆ ಬಗ್ಗೆ ಇಂದು ಸಂಜೆಯೊಳಗೆ ಬಗೆಹರಿಸುತ್ತೇವೆಂದು ಬಿಎಂಟಿಸಿ ಎಂಡಿ ಸತ್ಯವತಿ ಹೇಳಿದ್ದಾರೆ.
ಡೀಸೆಲ್ ಕೊರತೆ ಸಂಬಂಧ ಮಾತನಾಡಿದ ಸತ್ಯವತಿ ಕಳೆದ ಮಾರ್ಚ್ ತಿಂಗಳಿಂದ ರಿಟೇಲ್ ವ್ಯಾಪಾರಿಗಳಿಂದ ಡೀಸೆಲ್ ಖರೀದಿ ಮಾಡಲಾಗುತ್ತಿದೆ. ಬಲ್ಕ್ ಆಗಿ ತಗೋಳೋದ್ರಿಂದ ಪ್ರತಿ ಲೀಟರ್ ಗೆ 32 ರೂಪಾಯಿ ಹೆಚ್ಚಾಗ್ತಿತ್ತು. ಅದನ್ನ ತಪ್ಪಿಸಲು ರಿಟೈಲ್ ಮಾರುಕಟ್ಟೆಯಿಂದ ಡಿಪೋ ಬಂಕ್ ಗಳಿಗೆ ಡೀಸಲ್ ಪೂರೈಕೆ ಮಾಡಿಸಿಕೊಳ್ಳುತ್ತಿದ್ದೇವೆ. ಕಳೆದ ಮೂರು ದಿನಗಳಿಂದ ರಿಟೈಲ್ ಮಾರುಕಟ್ಟೆಯವರು ಬಂಕ್ಗೆ ಬಂದು ಡಿಸೇಲ್ ಹಾಕಿಸಿಕೊಳ್ಳಿ ಅಂತಾ ಡಿಪೋ ಬಂಕ್ ಗಳಿಗೆ ಸಪೈ ನಿಲ್ಲಿಸಿದ್ದಾರೆ.
ಖಾಸಗಿ ಬಂಕ್ನಲ್ಲಿ ಬಿಎಂಟಿಸಿ ಬಸ್ಗೆ ಡೀಸೆಲ್ ಹಾಕಿಸಿಕೊಳ್ಳೋದ್ರಿಂದ ಟ್ರಾಫಿಕ್ ಸಮಸ್ಯೆ ಆಗಲಿದೆ. ರಿಟೈಲ್ ವರ್ತಕರ ಬಳಿ ಮಾತುಕತೆ ಮಾಡುತ್ತಿದ್ದೇವೆ. ಇಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ಧಾರೆ. ಇನ್ನೂ ಎರಡು ದಿನಗಳಿಗೆ ಆಗುವಷ್ಟು ಸ್ಟಾಕ್ ಇದೆ. ಈ ಸಂಬಂಧ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಇಲಾಖೆಗೂ ಪತ್ರ ಬರೆದಿದ್ದೇವೆ. ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸತ್ಯವತಿ ಹೇಳಿದ್ದಾರೆ.
ಇದನ್ನೂ ಓದಿ : ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದ ಪಿಎಸ್ಐ ಶಾಂತಪ್ಪ.. ಗೃಹ ಸಚಿವರಿಂದ ಮೆಚ್ಚುಗೆ…!