ಬೆಂಗಳೂರು : ಸೈಲೆಂಟ್ ಆಗೇ ದೊಡ್ಡ ಸ್ಕೆಚ್ ಹಾಕಿದ್ನಾ ರೌಡಿ ಶೀಟರ್ ಸುನೀಲ..? ಚಾಮರಾಜ ಪೇಟೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ನಾ ಸೈಲೆಂಟ್ ಸುನೀಲ..? ಜಮೀರ್ ಅಹ್ಮದ್ ಖಾನ್ ವಿರುದ್ಧ ತೊಡೆತಟ್ಟಲು ಸೈಲೆಂಟ್ ಸ್ಕೆಚ್ ಹಾಕಿದ್ಧಾನೆ.
ಮುಸ್ಲಿಂ ವೋಟು ಡಿವೈಡ್ ಮಾಡಿ ಜಮೀರ್ಗೆ ಠಕ್ಕರ್ ಕೊಡಲು ಪ್ಲಾನ್ ನಡೆಸಿದ್ಧಾನೆ. ಇದಕ್ಕಾಗಿ ಇಮ್ರಾನ್ ಪಾಷಾ ಭೇಟಿ ಮಾಡಿದ್ನಾ ಸೈಲೆಂಟ್ ಸುನೀಲ..? ಆ ಫೋಟೋದಲ್ಲಿ ಸುನೀಲನ ಸೈಲೆಂಟ್ ಪ್ಲಾನ್ ಬಯಲಾಗ್ತಿದೆ.

ಇಮ್ರಾನ್ JDSನಿಂದ ಚಾಮರಾಜಪೇಟೆಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದು, ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳು ಸೇರಿ ಕಾಂಗ್ರೆಸ್ ಮಣಿಸೋ ಮಾಸ್ಟರ್ ಪ್ಲಾನ್ ಮಾಡಿದ್ರಾ..? ಸುನೀಲ ದುಷ್ಮನ್ ಕಾ ದುಷ್ಮನ್.. ದೋಸ್ತ್ ಅನ್ನೋ ಸೂತ್ರ ಬಳಸಲಿ ಸ್ಕೆಚ್ ಹಾಕಿದ್ಧಾನೆ. ಪಾದರಾಯನಪುರ ಮಾಜಿ ಕಾರ್ಪೋರೇಟರ್ ಇಮ್ರಾನ್ ಜೊತೆ ಸುನಿಲ್ ಕೈಜೋಡಿಸಿದ್ನಾ..?ನೀವು ಜೆಡಿಎಸ್ನಲ್ಲಿ ನಿಲ್ಲಿ.. ನಾನು ಕಮಲ ಅರಳಿಸ್ತೀನಿ ಅಂದಿದ್ನಾ ಸುನೀಲ..? ಚಾಮರಾಜ ಪೇಟೆ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಮುಸ್ಲಿಂ ವೋಟ್ ಡಿವೈಡ್ ಮಾಡಿದ್ರೆ ಪಕ್ಕಾ ಗೆಲ್ತೀವಿ ಅನ್ನೋ ಸ್ಕೀಮ್ ಮಾಡಿದ್ಧಾನೆ. ಒಂದು ತಿಂಗಳ ಹಿಂದಿನ ಫೋಟೋದಲ್ಲಿ ಸುನೀಲನ ಸೈಲೆಂಟ್ ಪ್ಲಾನ್ ರಿವೀಲ್ ಆಗಿದೆ. CCB ರೇಡ್ ನಡೆದಿಲ್ಲ ಅಂದ್ರೆ ಸೈಲೆಂಟಾಗಿ ಅಖಾಡಕ್ಕೆ ಇಳಿಯುತ್ತಿದ್ನಾ ಸುನೀಲ..?
ಇದನ್ನೂ ಓದಿ : ಚಿಲುಮೆ ಕೇಸ್ನಲ್ಲಿ ಮತ್ತೊಂದು ಬೃಹತ್ ತಲೆದಂಡ..? BBMP ಕಮಿಷನರ್ ತುಷಾರ್ ಗಿರಿನಾಥ್ ವರ್ಗಾವಣೆ ಆಗುತ್ತಾ..?