ಉಡುಪಿ: ನಳಿನ್ ಕುಮಾರ್ ಕಟೀಲ್ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಮಾಡೋದು ಬಿಜೆಪಿಯ ಹಗಲುಗನಸು. ರಾಜ್ಯದಲ್ಲಿ ಕಾಂಗ್ರೆಸ್ ಪರ್ಫಾರ್ಮೆನ್ಸ್ ಚೆನ್ನಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ತಿಳಿಸಿದ್ಧಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧ್ರುವನಾರಾಯಣ ಅವರು ನಳಿನ್ ಕುಮಾರ್ ಕಟೀಲ್ ಅಂಕಿ ಅಂಶ ಇಟ್ಟುಕೊಂಡು ಮಾತನಾಡಬೇಕು. ಅವರಿಗೆ ಗಟ್ಸ್ ಇದ್ದರೆ, ಸಮರ್ಥ ಅಧ್ಯಕ್ಷ ಆಗಿದ್ದರೆ, ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಬಂಧಿಸಿ. ನಳಿನ್ ಕುಮಾರ್ ಒಬ್ಬ ಹಿಟ್ ಅಂಡ್ ರನ್ ಕೇಸ್. ಸಿದ್ದರಾಮಯ್ಯ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಆಡಳಿತಗಾರ. ಬಿಜೆಪಿ ಮನೆಯಲ್ಲಿ ದೊಡ್ಡ ದೊಡ್ಡ ಹೆಗ್ಗಣ ಇದೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ.
ಇದನ್ನೂ ಓದಿ: ಬಿಜೆಪಿ ಸರ್ಕಾರ ನೀಚಗೆಟ್ಟ ಸರ್ಕಾರ… ಹೆಣಗಳ ಮೇಲೆ ರಾಜಕೀಯ ಮಾಡ್ತಿದೆ: ಮಹಮ್ಮದ್ ನಲಪಾಡ್…
ನಳಿನ್ ಕುಮಾರ್ ಕಟೀಲ್ ಅಸಮರ್ಥ ರಾಜ್ಯಾಧ್ಯಕ್ಷ, ಮೂರು ವರ್ಷದಿಂದ ಏನು ಮಾಡುತ್ತಿದ್ದಿರಿ. ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋದ ಬಗ್ಗೆ ಆಪಾದನೆ ಮಾಡುತ್ತಿದ್ದೀರ. ಯಡಿಯೂರಪ್ಪ, ಅಮಿತ್ ಶಾ, ಕಟ್ಟಾ ಸುಬ್ರಮಣ್ಯ ನಾಯ್ಡು, ಜನಾರ್ದನ ರೆಡ್ಡಿ ಜೈಲಿಗೆ ಹೋದವರೇ. ನಿಮ್ಮ ಮನೆ ಕೊಳೆತು ನಾರುತ್ತಿದೆ. ಉಡುಪಿ ಬಿಜೆಪಿ ಸಮಾವೇಶದಲ್ಲಿ ಜನಕ್ಕೆ ಮಂಕುಬೂದಿ ಎರಚಲಾಗಿದ. ಇಡೀ ದೇಶದಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ಇರೋದು ಕರ್ನಾಟಕದಲ್ಲಿ, ಸಮೀಕ್ಷೆ ಮೂಲಕ ರಾಜ್ಯದ ಭ್ರಷ್ಟಾಚಾರ ಹೊರಬಂದಿದೆ ಎಂದು ಧ್ರುವನಾರಾಯಣ್ ಅವರು ಕಿಡಿ ಕಾರಿದ್ದಾರೆ.