ಚಿರಂಜೀವಿ ಸರ್ಜಾ ಮರಣದ ಹಿಂದೆಯೇ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ! ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾಗೆ ಕೊರೋನಾ ಪಾಸಿಟಿವ್
ನಾಲ್ಕು ಸರ್ಕಾರಿ ಶಾಲೆ ದತ್ತು ಪಡೆದ “ಕೋಟಿಗೊಬ್ಬ” ಕಿಚ್ಚ..! ಅಭಿನಯ ಚಕ್ರವರ್ತಿಯಿಂದ ಮತ್ತೊಂದು ಸಮಾಜಮುಖಿ ಕೆಲಸ.. !
ನಟ ಚಿರಂಜೀವಿ ಸರ್ಜಾರ ಮರಣದ ದುಃಖದಲ್ಲಿರುವ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಖರಾಬು ಹಾಡಿನ ಖ್ಯಾತಿಯ ನಟ ಧ್ರುವ ಸರ್ಜಾ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ.
ಈ ಬಗ್ಗೆ ಖುದ್ದು ಧ್ರುವ ಸರ್ಜಾ ಟ್ವೀಟ್ ಮಾಡಿದ್ದು, ತಮಗೆ ಕೊರೋನಾ ವೈರಸ್ ಇರುವುದನ್ನು ಖಚಿತಪಡಿಸಿದ್ದಾರೆ. “ಕೊರೋನಾ ಲಕ್ಷಣಗಳು ಇದ್ದಿದ್ದರಿಂದ ನಾವು ಪರೀಕ್ಷೆಗೆ ಒಳಪಟ್ಟಿದ್ದೆವು. ಈ ವೇಳೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಾವು ಬೇಗ ಗುಣಮುಖರಾಗುತ್ತೇವೆ ಎನ್ನುವ ನಂಬಿಕೆ ಇದೆ. ನಮ್ಮ ಜೊತೆ ಸಂಪರ್ಕಕ್ಕೆ ಬಂದವರು ಕೊರೋನಾ ಟೆಸ್ಟ್ ಮಾಡಿಸಿ ಮನೆಯಲ್ಲೇ ಇರಿ,” ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಚಿರಂಜೀವಿ ಸರ್ಜಾ ನಿಧನದ ಸಮಯದಲ್ಲಿ ದ್ರುವ ಸರ್ಜಾ ಹೆಚ್ಚು ಜನರ ಸಂಪರ್ಕಕ್ಕೆ ಬಂದಿದ್ದರು. ಚಿರಂಜೀವಿ ಅಂತ್ಯ ಕ್ರಿಯೆ ವೇಳೆ ಸಾವಿರಾರು ಜನರು ಸೇರಿದ್ದರು. ಅಲ್ಲದೆ, ಅವರಿಗೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದಕ್ಕೆ ಆಸ್ಪತ್ರೆಗೂ ದಾಖಲಾಗಿದ್ದರು. ಈ ಅವಧಿಯಲ್ಲಿ ಅವರಿಗೆ ಕೊರೋನಾ ಅಂಟಿದೆ ಎನ್ನಲಾಗುತ್ತಿದೆ. ಇನ್ನು, ಧ್ರುವ ಕುಟುಂಬದವರು ಎಲ್ಲರನ್ನೂ ಕೊರೋನಾ ಟೆಸ್ಟ್ಗೆ ಒಳಪಡಿಸಲಾಗುತ್ತಿದೆ ಎನ್ನಲಾಗಿದೆ.
ಚಿರಂಜೀವಿ ಸರ್ಜಾ ಸಾವಿನ ನಂತರ ಧ್ರುವ ಸರ್ಜಾ ಅಣ್ಣನ ಅಗಲಿಕೆಯಿಂದ ಕುಗ್ಗಿದ್ದರು. ಅಲ್ಲದೆ, ಚಿರು ಸಾವು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೋವು ತಂದಿತ್ತು. ಹೀಗಿರುವಾಗಲೇ ಧ್ರುವಾ ಹಾಗೂ ಪ್ರೇರಣಾಗೆ ಕೊರೋನಾ ಪಾಸಿಟಿವ್ ಬಂದಿರುವುದು ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.