ಮೈಸೂರು: ಮೈಸೂರಿನಲ್ಲಿ MBA ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿ ನಾಪತ್ತೆಯಾಗಿದ್ದ ಕಾಮುಕರನ್ನು DG-IGP ಪ್ರವೀಣ್ ಸೂದ್ ಆ್ಯಂಡ್ ಟೀಮ್ ಬಂದಿಸಿದ್ದು, ಪ್ರಕರಣದ ಬಗ್ಗೆ ಇಂದು ಸಂಜೆಯೇ DG-IGP ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ.
ಮೈಸೂರಿನ ಈ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಕೃತ್ಯ ವೆಸಗಿ ಕಣ್ಮರೆಯಾಗಿದ್ದ ಕೀಚಕರಿಗೆ ಹಿಡಿ ಶಾಪವನ್ನ ಹಾಕಲಾಗಿತ್ತು. ಅತ್ಯಾಚಾರವಾಗಿ 85 ಘಂಟೆಗಳೇ ಕಳೆದರೂ ಕಾಮುಕರನ್ನು ಭೇದಿಸಲಾಗಲಿಲ್ಲ ಎಂದು ಪೊಲೀಸ್ ಇಲಾಖೆಯ ಮೇಲೂ ಬೆಟ್ಟು ತೋರಿಸಲಾಗುತ್ತಿತ್ತು. DG-IGP ಪ್ರವೀಣ್ ಸೂದ್ ಆ್ಯಂಡ್ ಟೀಮ್ ಪ್ರಕರಣ ಬೆಳಕಿಗೆ ಬಂದ ದಿನದಿಂದ ಮೈಸೂರಿನಲ್ಲೇ ಬೀಡು ಬಿಟ್ಟು ಆರೋಪಿಗಳನ್ನು ಬಂಧಿಸಲು ಶತ ಪ್ರಯತ್ನ ಪಟ್ಟಿದ್ದಾರೆ. ಕೊನೆಗೂ ನಾಲ್ಕು ದಿನಗಳ ನಂತರ ಆರೋಪಿಗಳು ಲಾಕ್ ಆಗಿದ್ದು, ಕೃತ್ಯದಲ್ಲಿ 6 ಮಂದಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಸಂತ್ರಸ್ತೆ ಸ್ನೇಹಿತ ಕೊಟ್ಟ ಮಾಹಿತಿ ಮೇಲೆ ಆರೋಪಿಗಳು ವಶಕ್ಕೆ ಪಡೆಯಲಾಗಿದ್ದು, ಸಂಜೆ ವೇಳೆಗೆ ಮತ್ತಷ್ಟು ಮಂದಿ ವಶಕ್ಕೆ ಪಡೆಯೋ ಸಾಧ್ಯತೆಗಳಿವೆ. ಈ ಪ್ರಕರಣದ ಬಗೆಗಿನ ಎಲ್ಲಾ ಮಾಹಿತಿಯನ್ನ ಇಂದು ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ DG-IGP ಪ್ರವೀಣ್ ಸೂದ್ ನೀಡಲಿದ್ದಾರೆ.
ಇದನ್ನೂ ಓದಿ:#Flashnews ಕೊನೆಗೂ ಲಾಕ್ ಆದ್ರು ಮೈಸೂರು ಗ್ಯಾಂಗ್ ರೇಪಿಸ್ಟ್..