ಕಲಬುರಗಿ: ಬಡತನವಿದ್ರೂ ಸುಖವಾಗಿ ಸಂಸಾರ ಮಾಡಿಕೊಂಡು ಇದ್ರು ಆ ದಂಪತಿ… ಪಾನಿಪುರಿ ವ್ಯಾಪಾರ ಮಾಡಿಕೊಂಡು ಮುದ್ದಾದ ಹೆಣ್ಣು ಮಗಳೊಂದಿಗೆ ಆರಾಮಗಿ ಜೀವನ ಸಾಗಿಸುತ್ತಿದ್ರು. ಅನುಮಾನವೆಂಬ ಭೂತ ಮೆಟ್ಟಿಸಿಕೊಂಡಿದ್ದ ಗಂಡ, ಹೆಂಡತಿ ಮತ್ತು ಮಗಳಿನ ಜೀವಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾನೆ.
ಇದನ್ನೂ ಓದಿ: ಹೆತ್ತ ತಾಯಿಯನ್ನೇ ಕೊಚ್ಚಿ ಕೊಂದು ಮೃತದೇಹದ ಪಕ್ಕದಲ್ಲೇ ಕುಳಿತಿದ್ದ ಮಗ…
ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ವಾಸವಾಗಿದ್ದ ಈ ಸುಂದರ ಕುಟುಂಬ ಜೀವನೋಪಾಯಕ್ಕಾಗಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದರು. 47 ವರ್ಷದ ಪತಿ ದಿಗಂಬರ್ ಗಾಂಜಲಿ ತನ್ನ 35 ವರ್ಷದ ಪತ್ನಿ ಜಗದೀಶ್ವರಿ ಹಾಗೂ 11 ವರ್ಷದ ಮುದ್ದಾದ ಮಗಳು ಪ್ರಿಯಾಂಕಳೊಂದಿಗೆ ಆರಾಮವಾಗಿ ಜೀವನ ಸಾಗಿಸುತ್ತಿದ್ದ. ಬಡತನವಿದ್ರೂ, ಹಲವು ವರ್ಷಗಳಿಂದ ಅನ್ನೊನ್ಯವಾಗಿದ್ದ ಕುಟುಂದ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ ಒಂದೇ ರಾತ್ರಿಯಲ್ಲೆ ಹೆಂಡತಿ ಮತ್ತು ಮಗಳನ್ನ ಹೊಡೆದು ಹೆಣವಾಗಿಸಿದ್ದಾನೆ ದಿಗಂಬರ.
ಇದನ್ನೂ ಓದಿ: ಅತ್ಯಾಚಾರಕ್ಕೆ ಯತ್ನಿಸಿದ ಯುವಕನಿಗೆ ಇದೆಂಥಾ ಶಿಕ್ಷೆ ..? ಆರೋಪಿಗೆ ನೀಡಿದ ಶಿಕ್ಷೆಯಿಂದ ಮಹಿಳೆಯರು ಫುಲ್ ಖುಷ್..!
ಮೊದ ಮೊದಲು ದಿಗಂಬರ್ ಗಾಂಜಲಿ ಈ ಹಿಂದೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾ ಪತ್ನಿ ಹಾಗೂ ಮಗಳೊಂದಿಗೆ ಕಲಬುರಗಿ ನಗರದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಒಂದು ದಿನ ಪಾನಿಪುರಿ ತಿನ್ನಲೆಂದು ಕಿಡಿಗೇಡಿಗಳ ಗುಂಪು ಬಂದಿತ್ತು. ಹೊಟ್ಟೆ ತುಂಬೋವರೆಗೂ ಪಾನಿಪುರಿ ತಿಂದು ದುಡ್ಡು ಕೊಡದೇ ಹೋಗುತ್ತಿದ್ರು, ದಿಗಂಬರ ಅವರನ್ನು ತಡೆದು ದುಡ್ಡು ಕೊಡಿ ಎಂದಿದ್ದ. ಹಣ ಕೊಡದೆ ಇದ್ದಿದ್ದಕ್ಕೆ ಕಡಚಿ ತೆಗೆದುಕೊಂಡು ಆ ಪೋಲಿಗಳಿಗೆ ಹೊಡೆಯಲು ಹೋಗಿದ್ದ. ಅವರು ನಿನ್ನನ್ನು ಮುಗಿಸುತ್ತೇವೆ ಎಂದು ಧಮ್ಕಿ ಹಾಕಿದ್ರು. ಈ ಧಮ್ಕಿಗೆ ಹೆದರಿದ ದಿಗಂಬರ ಪರಿವಾರ ಸಮೇತ ಸೇಡಂಗೆ ಶಿಫ್ಟ್ ಆಗಿದ್ದ.
ಜಗದೀಶ್ವರಿ ತವರು ಮನೆಯಾದ ಸೇಡಂನ ಪಟ್ಟಣದ ವಿಶ್ವನಗರ ಬಡಾವಣೆಗೆ ಶಿಫ್ಟ್ ಆದ ಮೇಲೆ ಎರಡು ತಿಂಗಳು ಎಲ್ಲವೂ ಚೆನ್ನಾಗಿತ್ತು. ದಿಗಂಬರನಿಗೆ ಅದೇನಾಯ್ತು ಗೊತ್ತಿಲ್ಲ, ಇದ್ದಕ್ಕಿದ್ದಹಾಗೇ ಆತ್ನ ಪತ್ನಿ ಜಗದೀಶ್ವರಿ ಮೇಲೆ ಅನುಮಾನ ಪಡಲು ಆರಂಭಿಸಿದ. ನಿನಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ಜಗಳವಾಡುತ್ತಿದ್ದ. ಕಂಠಪೂರ್ತಿ ಕುಡಿದು ಬಂದು ಪತ್ನಿಯಲ್ಲದೇ ಏನು ಅರಿಯದ ಮುದ್ದಾದ ಮಗಳನ್ನ ಸಹ ತನ್ನ ಸಿಟ್ಟಿಗೆ ಬಲಿ ಪಡೆದಿದ್ದಾನೆ. ರಕ್ತದ ಮಡುವಿನಲ್ಲಿ ಬರ್ಬರವಾಗಿ ಹತ್ಯೆಯಾಗಿ ಬಿದ್ದಿರುವ ತಾಯಿ ಮತ್ತು ಮಗಳನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.. ಮತ್ತೊಂದೆಡೆ ಪೊಲೀಸರು ದಿಗಂಬರನನ್ನು ಬಂಧಿಸಿದ್ದಾರೆ.