ಬೆಂಗಳೂರು: ಲಕ್ಷ ಲಕ್ಷ ಹಣ, ಕೆಜಿ ಗಟ್ಟಲೇ ಬಂಗಾರ ಕೊಟ್ರೂ ತೀರದ ದಾಹ, ಸುಳ್ಳು ಹೇಳಿ ದಂತ ವೈದ್ಯೆಯನ್ನ ಮದುವೆಯಾದ ಬಳ್ಳಾರಿ ಭೂಪ. ನಾನು ಇಂಜಿನಿಯರ್, ಆಸ್ಟ್ರೇಲಿಯಾದಲ್ಲಿ ಕೆಲಸ ಎಂದು ಪುಂಗಿದ್ದ, ಮದುವೆಯಾಗಿ 2 ತಿಂಗಳಿಗೇ ಕಿರುಕುಳ ಕೊಡಲು ಶುರುಮಾಡಿದ್ದ.
ಹೈದ್ರಬಾದ್ನ ವೈದ್ಯೆಯನ್ನ ಮದುವೆಯಾಗಿದ್ದ ರಘುರಾಮ ರೆಡ್ಡಿ, 2019ರಲ್ಲಿ ವೈದ್ಯೆ ಜೊತೆ ವಿವಾಹವಾಗಿದ್ದ.
50 ಲಕ್ಷ ಹಣ 1 ಕೆ.ಜಿ. ಬಂಗಾರ ಪಡೆದಿದ್ದ, ಹೆಚ್ಚಿನ ಹಣ ಕೊಡದ ಹಿನ್ನೆಲೆ 2ನೇ ಮದುವೆಯಾಗಿದ್ದಾನೆ. ಡೈವೋರ್ಸ್ ಕೊಡದೇ ಮತ್ತೊಂದು ಮದುವೆಯಾಗಿದ್ದು, ಇದನ್ನ ಕೇಳಲು ಬಂದ ಮೊದಲ ಪತ್ನಿ ಮೇಲೆ ಹಲ್ಲೆ ಮಾಡಲಾಗಿದೆ.
ಮೊದಲ ಪತ್ನಿ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ರಘುರಾಮ ರೆಡ್ಡಿ, ತಂದೆ ನಾಗರೆಡ್ಡಿ, ಸಹೋದರ ಹರೀಶ್ ರೆಡ್ಡಿ ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ:2ನೇ ದಿನವೂ ಮುರುಘಾ ಶ್ರೀಗಳಿಗೆ ವಿಚಾರಣೆ ಡ್ರಿಲ್..! ಸ್ವಾಮೀಜಿ ಕರೆದೊಯ್ದು ಮಠದಲ್ಲಿ ಸ್ಥಳ ಮಹಜರು..!