ಬೆಂಗಳೂರು : ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆಯರ ಬಂಧನ ಪ್ರಕರಣ ಸಂಬಂಧ ಟಿ.ಎ.ಶರವಣ ಮಾತನಾಡಿ, ಆಶಾ ಕಾರ್ಯಕರ್ತೆಯರ ಪರ ನಿಲ್ಲಲು ಹೆಚ್ ಡಿಕೆ ಸೂಚಿಸಿದ್ದಾರೆ, ಜೆಡಿಎಸ್ ಎಂಎಲ್‌ಸಿಗಳ ಬೆಂಬಲ, ಬಂಧಿತ ಅಂಗನಾಡಿ ಕಾರ್ಯಕರ್ತೆಯರ ಬಿಡುಗಡೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟಿ.ಎ.ಶರವಣ ಮಾತನಾಡಿ, ಇದು ಮಾನವೀಯತೆ ಇಲ್ಲದ ಭಂಡತನದ ಸರ್ಕಾರ, ಮಹಿಳೆಯರನ್ನ ಅಮಾನವೀಯವಾಗಿ ನಡೆಸಿಕೊಂಡಿದೆ. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರದಿದ್ರೆ ಸದನದ ಒಳಗೆ ಹೊರಗೆ ಧ್ವನಿ ಎತ್ತುತ್ತೇವೆ. ಈ ಸರ್ಕಾರ ಇನ್ನ ಕೇವಲ ಮೂರು ತಿಂಗಳಷ್ಟೆ ಇರುತ್ತೆ, ಮತ್ತೆ ಕುಮಾರಸ್ವಾಮಿ ಸಿಎಂ ಆಗಿ ಇವರ ಬೇಡಿಕೆ ಈಡೇರಿಸುತ್ತಾರೆ. ನಮ್ಮ ಪ್ರಣಾಳಿಕೆಯಲ್ಲೂ ಇವರ ಬೇಡಿಕೆಗಳ ಈಡೇರಿಸುವ ಭರವಸೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಭಾರತದ ನೂತನ ಸಂಸತ್ ಭವನದ ಫೋಟೋಸ್ ಇಲ್ಲಿದೆ ನೋಡಿ..