ಚಿಕ್ಕಮಗಳೂರು : ದತ್ತಪೀಠದಲ್ಲಿ ಮುಸ್ಲಿಮರು ನಮಾಜ್ ವಿಡಿಯೋ ವೈರಲ್ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಪ್ರತಿಕ್ರಿಯಿಸಿ ಕೋರ್ಟ್ ಆದೇಶ ಉಲ್ಲಂಘನೆ ಆಗಿಲ್ಲ, ಆಗೋಕೆ ಬಿಡಲ್ಲ. ವಿವಾದಿತ ಸ್ಥಳಕ್ಕೂ, ಈ ವಿಡಿಯೋ ಪ್ರದೇಶಕ್ಕೂ ವ್ಯತ್ಯಾಸವಿದೆ. ವಿಡಿಯೋ ಜಾಗಕ್ಕೂ, ವಿವಾದಿತ ಜಾಗಕ್ಕೂ ದೂರ ಇದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಕೆ.ಎನ್.ರಮೇಶ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರುವ ವಿಡಿಯೋ ಪರಿಶೀಲಿಸಿದ್ದೇವೆ. ಈ ವಿಡಿಯೋ ಹಳೇ ವಿಡಿಯೋ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ವಿಡಿಯೋ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ..! ಮಹತ್ವದ ಮೀಟಿಂಗ್ ಕರೆದ ಸಿಎಂ ಬೊಮ್ಮಾಯಿ..!