ಸಿಲಿಕಾನ್ ಸಿಟಿ ಬೆಂಗಳೂರು ಕೊರೋನಾ ಅಟ್ಟಹಾಸಕ್ಕೆ ಬೆಚ್ಚಿ ಬಿದ್ದಿದೆ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಇನ್ನು ಕೊರೋನಾಗೆ ಹೆಮ್ಮಾರಿಗೆ ಬಲಿಯಾಗೋರ ಸಂಖ್ಯೆ ಕೂಡಾ ಏರಿಕೆಯಾಗ್ತಿದ್ದು, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಕೊರೋನಾ ವೈರಸ್ ಸೋಂಕಿತರ ನೆರವಿಗೆ ಧಾವಿಸಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಕೊರೋನಾ ಸೋಂಕಿತರ ಟ್ರೀಟ್ಮೆಂಟ್ಗೆ ವ್ಯವಸ್ಥೆ ಮಾಡ್ತಿದ್ದಾರೆ. ಕ್ಷೇತ್ರದಾದ್ಯಂತ ಕರೋನ ಹೆಚ್ಚಾಗುತ್ತಿರುವ ಕಾರಣ ದಾಸರಹಳ್ಳಿ ಬಿ.ಬಿ.ಎಂ.ಪಿ ವಲಯ ಕಚೇರಿಯಲ್ಲಿ ಖಾಸಗಿ ಆಸ್ಪತ್ರೆಗಳ ಜತೆ ಸಭೆ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಗಳ ಮಾಲೀಕರು, ಆಡಳಿತಾಧಿಕಾರಿಗಳು ಹಾಗೂ ದಾಸರಹಳ್ಳಿ ವಲಯ ಜಂಟಿ ಆಯುಕ್ತರು ಮತ್ತು ಉನ್ನತ ಅಧಿಕಾರಿಗಳ ಸಭೆ ಕರೆದು ಚಿಕಿತ್ಸೆ ಕುರಿತು ಚರ್ಚೆ ನಡೆಸಿದ್ದು, ಕ್ಷೇತ್ರದ ಖಾಸಗಿ ಆಸ್ಪತ್ರೆಗಳಲ್ಲಿ ವಿಶೇಷವಾಗಿ ದಾಸರಹಳ್ಳಿ ಕ್ಷೇತ್ರದ ಜನತೆಗೆ ಶೇ 50% ಬೆಡ್ಡುಗಳನ್ನು ಕಾಯ್ದಿರಿಸುವಂತೆ ಸೂಚಿಸಿದ್ದಾರೆ.
ಕ್ಷೇತ್ರದಲ್ಲಿ ಕರೋನ ಸಂಬಂಧ ಬರುವ ಯಾವುದೇ ದೂರುಗಳಿಗೆ ಸಹಾಯವಾಣಿ ತೆರೆಯಲಾಗಿದ್ದು (080-29590057) (080-29635906) (080-29635904)ಈ ಸಹಾಯವಾಣಿಯಲ್ಲಿ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸುವಂತೆ ಜಂಟಿ ಆಯುಕ್ತರಿಗೆ ಹಾಗೂ ಅಧಿಕಾರಿಗಳಿಗೆ ಆದೇಶಿಸಿದರು. ಕ್ಷೇತ್ರದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಜನರು ನಿಶ್ಚಿಂತೆಯಿಂದ ಮನೆಯಲ್ಲೇ ಇರುವಂತೆ ವಿನಂತಿ ಮಾಡುವುದರ ಮೂಲಕ ಇತರೆ ಶಾಸಕರಿಗೆ ಮಾದರಿಯಾಗಿದ್ದಾರೆ.