ಪಂಚಾಂಗ:
ದಿನಾಂಕ: 31/07/2020ನೇ
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ ಶುಕ್ರವಾರ ಜೇಷ್ಠ ನಕ್ಷತ್ರ ನಕ್ಷತ್ರ 07:06 ನಿಮಿಷದವರೆಗೆ ಮಾತ್ರ ನಂತರ ಮೂಲಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:54 ರಿಂದ 12:29
ಗುಳಿಕಕಾಲ: ಬೆಳಗ್ಗೆ 07:44 ರಿಂದ 09:19
ಯಮಗಂಡಕಾಲ: ಮಧ್ಯಾಹ್ನ 03:39 ರಿಂದ 05:14
ದಿನ ವಿಶೇಷತೆ
ವರಮಹಾಲಕ್ಷ್ಮಿ ವ್ರತ
ಮೇಷ
ವ್ಯರ್ಥವಾದ ಪ್ರಯತ್ನಗಳಿಂದ ಕೆಲಸ ಕಾರ್ಯಗಳಲ್ಲಿ ಸಮಸ್ಯೆ ,ಆರ್ಥಿಕವಾಗಿ ಧನಾಗಮನ ಉತ್ತಮವಿದ್ದರೂ ಖರ್ಚುಗಳು ಹೆಚ್ಚು , ದೂರದ ಪ್ರಯಾಣದಲ್ಲಿ ಕಾರ್ಯಸಿದ್ದಿ. ಹೆಚ್ಚು ಪೂಜೆ ಪುನಸ್ಕಾರಗಳಲ್ಲಿ ವಲವು ಉಂಟಾಗುವುದು.
ವೃಷಭ
ಆರ್ಥಿಕ ವಿಷಯಗಳಲ್ಲಿ ಎಚ್ಚರ ವಹಿಸುವುದು ಅಗತ್ಯ. ಯಾವುದೇ ಕೆಲಸ ಮಾಡುವ ಮುನ್ನ ಎರಡು ಬಾರಿ ಯೋಚಿಸಿ.ಮನೋರಂಜನೆ ಗೋಸ್ಕರ ದೂರದ ಪ್ರಯಾಣ ಸಾಧ್ಯತೆ,ಅಂಗಡಿ ವ್ಯಾಪಾರಿಗಳಿಗೆ ಲಾಭ ಹೆಚ್ಚಳ.
ಮಿಥುನ
ಆದಾಯಕ್ಕಿಂತ ಖರ್ಚು ಹೆಚ್ಚು, ಮನೆಯಲ್ಲಿ ಕಿರಿಕಿರಿ ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ. ಅತಿಥಿಗಳ ಆಗಮನದಿಂದ ಮನಸ್ಸಿಗೆ ಸಂತೋಷ. ವಿದ್ಯಾರ್ಥಿಗಳು ಅಭ್ಯಾಸಬಲಕ್ಕೆ ಒತ್ತು ನೀಡಬೇಕು.
ಕಟಕ
ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಕಿರಿಕಿರಿ, ಆಧ್ಯಾತ್ಮಿಕ ಕಾರ್ಯಗಳಲ್ಲಿಪಾಲ್ಗೊಳ್ಳುತ್ತೀರಿ. ನಿಮ್ಮ ಸ್ವಂತ ಬುದ್ದಿಯಿಂದ ಮುನ್ನಡೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.
ಸಿಂಹ
ಗೃಹ ಸಮಸ್ಯೆಗೆ ಪರಿಹಾರ ಸಿಗಲಿದೆ. ಬಟ್ಟೆ ಹಾಗೂ ದಿನಸಿ ವ್ಯಾಪಾರಿಗಳಿಗೆ ಲಾಭ., ಹೊಸ ಜವಾಬ್ದಾರಿಗಳು ದೊರೆಯುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಒಲವು.
ಕನ್ಯಾ
ಈ ದಿನ ದಾಯಾದಿಗಳೊಂದಿಗೆ ಆದಷ್ಟು ದೂರವಿರಿ. ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಖರ್ಚು ಉಂಟಾಗುವುದು. ಸಂಚಾರದಲ್ಲಿ ಜಾಗ್ರತೆ. ದೀರ್ಘಕಾಲದಿಂದ ಕಿರಿಕಿರಿ ನೀಡುತ್ತಿದ್ದ ತೊಂದರೆಗೆ ಪರಿಹಾರ ದೊರೆಯಲಿದೆ.
ತುಲಾ
ವ್ಯವಹಾರದಲ್ಲಿ ಹೆಚ್ಚು ಅನುಕೂಲ. ಅವಿವಾಹಿತರಿಗೆ ಕಂಕಣಭಾಗ್ಯ ಪ್ರಾಪ್ತಿಯಾಗಲಿದೆ. ಭೂ ವ್ಯವಹಾರಗಳಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಲದ ಮೊರೆ ಹೋಗುವ ಸಾಧ್ಯತೆ.
ವೃಶ್ಚಿಕ
ಸ್ವಂತ ಕೆಲಸದಲ್ಲಿ ಇರುವಂಥವರಿಗೆ ಹೆಚ್ಚಿನ ಸಮಸ್ಯೆಗಳು ಉಂಟಾಗುವುದು, ಲೇವಾದೇವಿ ವಹಿವಾಟುಗಳಲ್ಲಿ ತೊಂದರೆ. ವಾಹನ ಖರೀದಿ, ಭೂ ಖರೀದಿಗಳ ಬಗ್ಗೆ ದುಡುಕದಿರಿ.
ಧನು
ಯಾವುದೇ ವಿಚಾರದಲ್ಲಿ ವಾದ-ವಿವಾದಗಳಿಗೆ ಗಮನ ನೀಡಬೇಡಿ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶದ ಸೂಚನೆ ,ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದ ಉತ್ತಮ ಫಲಿತಾಂಶ ಸಿಗಲಿವೆ.
ಮಕರ
ವ್ಯಾಪಾರ, ವ್ಯವಹಾರಗಳು ಹೆಚ್ಚಿನ ಲಾಭ, ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಮಸ್ಯೆಗಳನ್ನು ತಂದು ಇಟ್ಟುಕೊಳ್ಳುತ್ತೀರಿ.
ವಾಹನ ಖರೀದಿ ಮಾಡುವ ಪ್ರಯತ್ನ ಮಾಡುತ್ತೀರಿ.
ಕುಂಭ
ನಿಮ್ಮ ಆರೋಗ್ಯದ ವಿಚಾರದಲ್ಲೂ ಸ್ವಲ್ಪ ಎಚ್ಚರದಿಂದ ಇರಬೇಕು. ಗುತ್ತಿಗೆ ವ್ಯವಹಾರ ನಡೆಸುವವರಿಗೆ ಹೆಚ್ಚಿನ ಆದಾಯ ತರುವಂತಹ ಅವಕಾಶಗಳು ದೊರಕುವ ಸಾಧ್ಯತೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆ.
ಮೀನ
ನಿಂತು ಹೋದ ಕೆಲಸಗಳು ಪುನಃ ಚಾಲನೆಗೆ ಬರಲಿವೆ. ಮನೆಯಲ್ಲಿ ಶುಭಮಂಗಳ ಕಾರ್ಯಗಳ ಸಂಭ್ರಮ. ಶತ್ರುಗಳಿಂದ ತೊಂದರೆ, ಕೃಷಿಕರಿಗೆ ಲಾಭ, ವಾಹನದಿಂದ ಅನುಕೂಲ.
ಜಾತಕ ಪರಿಶೀಲನೆ ಹಾಗೂ ಪರಿಹಾರಕ್ಕಾಗಿ ಸಂಪರ್ಕಿಸಿ:
ಮಹರ್ಷಿ ಗುರೂಜಿ
ಭಾರತೀಯ ಸಂಪ್ರದಾಯ ಟ್ರಸ್ಟ್ (ರಿ)
44/1, 3ನೇ ಮಹಡಿ 4ನೇ ರಸ್ತೆ ಮಲ್ಲೇಶ್ವರಂ ಬೆಂಗಳೂರು -560003
ಮೊಬೈಲ್ ಸಂಖ್ಯೆ- 8151812345,9845261111