ಶಾರ್ವರಿನಾಮ ಸಂವತ್ಸರ
ಉತ್ತರಾಯಣ
ಹೇಮಂತ ಋತು
ಪುಷ್ಯ ಮಾಸ
ಶುಕ್ಲ ಪಕ್ಷ
ಚತುರ್ದಶಿ ತಿಥಿ
ಪುನರ್ವಸು ನಕ್ಷತ್ರ
ಬುಧವಾರ
27/01/2021
ಸೂರ್ಯೋದಯ ಬೆಳಗ್ಗೆ 06:46
ಸೂರ್ಯಾಸ್ತ : ಸಂಜೆ 06:19
ರಾಹುಕಾಲ : 12:33 ರಿಂದ 13:53
ಗುಳಿಕಕಾಲ: 11:13 ರಿಂದ 12:33
ಯಮಗಂಡಕಾಲ: 08:34 ರಿಂದ 09:54
ಅಮೃತ ಘಳಿಗೆ : 01:20 ರಿಂದ 02:59
ಮೇಷ ರಾಶಿ
ಯೋಜಿಸಿದ್ದ ಹೊಸ ವ್ಯಾವಹಾರಿಕ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಕುರಿತು ಪ್ರೇರಿತರಾಗಿರುವಂತೆ ಅನಿಸುವಿರಿ. ಮುಂದಕ್ಕೆ ಸಾಗಿ. ಏನೇ ಆದರೂ, ಕೆಲವೊಂದು ವಿಚಾರಗಳ ಬಗ್ಗೆ ನೀವು ಇನ್ನೂ ಸ್ಥಿರ ನಿರ್ಧಾರವನ್ನು ಹೊಂದಿರುವುದಿಲ್ಲ. ಆದ್ದರಿಂದ ನೀವು ದೃಢ ನಿರ್ಧಾರಕ್ಕೆ ಬರಲು ಅಶಕ್ತರಾಗುವಿರಿ. ಇದೇ ವಿಚಾರವು ನಿಮ್ಮ ಮನಸ್ಸನ್ನು ವ್ಯಾಪಿಸಿರುತ್ತದೆ. ನಿಮ್ಮ ಚಟುವಟಿಕೆಗಳ ವೇಗವನ್ನು ತಗ್ಗಿಸಿ ಮತ್ತು ವಿಶ್ರಾಂತಿಯನ್ನು ಪಡೆಯಿರಿ.
ವೃಷಭ ರಾಶಿ
ವೃತ್ತಿಕ್ಷೇತ್ರದಲ್ಲಿ ಶತ್ರುಗಳ ಪ್ರಾಬಲ್ಯವಿರುತ್ತದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಮತ್ತು ನಿಮ್ಮದೇ ಹಾದಿಯಲ್ಲಿ ಸಾಗಿ. ಒಂದು ಅಥವಾ ಎರಡು ದಿನಗಳ ಮಟ್ಟಿಗೆ ಪ್ರಯಾಣ ತೆರಳುವ ಸಂಭವವಿದೆ. ನೀವು ಗಟ್ಟಿಯಾಗಿ ನೆಲೆನಿಲ್ಲಲು ಈ ವರ್ಷ ಹಲವು ಅವಕಾಶಗಳು ಲಭ್ಯವಾಗಲಿವೆ. ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ನೀವು ಸಮರ್ಥರಾದರೆ ಈ ವರ್ಷ ನಿಮಗೆ ಅದ್ಭುತವಾಗಿರಲಿದೆ. ನಿಮ್ಮ ಗುರಿಗಳನ್ನು ಸಾಧಿಸಲು ಈ ವರ್ಷ ಎಲ್ಲಾ ಮಿತಿಗಳನ್ನು ದಾಟುತ್ತೀರಿ.
ಮಿಥುನ ರಾಶಿ
ಹೆಚ್ಚಿನ ಸುಖ ಸಂತೋಷವನ್ನು ಪಡೆದುಕೊಳ್ಳಲು ಹಾಗೂ ಬಯಕೆಗಳನ್ನು ಪೂರೈಸಲು ನೀವು ಹೆಚ್ಚು ಶ್ರಮ ಪಡುತ್ತೀರಿ. ನಿಮ್ಮ ಹಿರಿಯರ ಆಶೀರ್ವಾದದಿಂದ, ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ವಿಯಾಗುತ್ತೀರಿ. ವೈವಾಹಿಕ ಬದುಕು ಈ ಬಾರಿ ಸಾಧಾರಣವಾಗಿರುತ್ತದೆ. ನಿಮ್ಮ ಕೌಟುಂಬಿಕ ಜೀವನವು ಈ ಹಿಂದಿಗಿಂತ ಉತ್ತಮವಾಗಿರಲಿದೆ. ಸುದೀರ್ಘ ಪ್ರವಾಸಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ನೀವು ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು.
ಕರ್ಕಾಟಕ ರಾಶಿ
ಈ ಪ್ರವಾಸಗಳು ನಿಮ್ಮ ಸುಪ್ತ ಶಕ್ತಿಯನ್ನು ಬಡಿದೆಬ್ಬಿಸುತ್ತದೆ ಮತ್ತು ಇದರಿಂದ ನೀವು ಆತ್ಮವಿಶ್ವಾಸವನ್ನು ಪಡೆದುಕೊಳ್ಳಲಿದ್ದೀರಿ. ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ. ಆದರೂ ಈ ವರ್ಷ ಕರ್ಮವನ್ನು ಎದುರಿಸಲು ಸಿದ್ಧರಾಗಿ. ನೀವು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರೆ, ಈ ವರ್ಷದ ಆರಂಭದಲ್ಲಿ ನಿಮಗೆ ದಂಡ ತೆರುವ ಸನ್ನಿವೇಶ ಎದುರಾದೀತು. ಅಂತಹ ಸಂದರ್ಭಗಳಿಂದ ಹೊರಬರಲು ಬಯಸಿದರೆ ರಾಜಿ ಮಾಡಿಕೊಳ್ಳುವುದು ಒಳ್ಳೆಯದು.
ಸಿಂಹ ರಾಶಿ
ನಿಮ್ಮ ಗುರಿ ಆಶಯವನ್ನು ಸಾಧಿಸುತ್ತೀರಿ. ಈ ವರ್ಷ ನಿಮಗೆ ಹೆಚ್ಚಿನ ಖರ್ಚು ವೆಚ್ಚಗಳು ಕಂಡು ಬಂದಾವು. ಅದರಂತೆ ನಿಮ್ಮ ಆದಾಯವೂ ಸೀಮಿತವಾಗಿರಬಹುದು. ನಿಮ್ಮ ಮೇಲೆ ಯಾವುದೇ ದೊಡ್ಡ ಆರ್ಥಿಕ ಒತ್ತಡವಿಲ್ಲದಿದ್ದರೂ, ಕೌಟುಂಬಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುವ ಸನ್ನಿವೇಶ ಎದುರಾದೀತು. ಇದರಿಂದಾಗಿ ನಿಮಗೆ ಕಿರಿಕಿರಿಯಾದೀತು. ನಿಮ್ಮ ಕುಟುಂಬಸ್ಥರೊಂದಿಗೆ ವೈಮನಸ್ಸು ಉಂಟಾದೀತು. ಈ ಸಂದರ್ಭದಲ್ಲಿ ಸಂಸಾರ ಬಹಳ ಮುಖ್ಯ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಿ.
ಕನ್ಯಾ ರಾಶಿ
ಇದು ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾದೀತು. ಕಠಿಣ ಪರಿಶ್ರಮವೇ ನಿಮಗೆ ಗೆಲುವು ತಂದು ಕೊಡುತ್ತದೆ. ಈ ಬಾರಿ ನೀವು ವಿದೇಶ ಪ್ರಯಾಣ ಮಾಡುವ ಕನಸು ಕಾಣುತ್ತಿದ್ದರೆ ಹಲವು ಬಾರಿ ಈ ಅವಕಾಶ ನಿಮಗೆ ಒದಗಿ ಬರಬಹುದು. ನಿಮ್ಮ ಸ್ವಂತ ವ್ಯವಹಾರದ ಕಾರಣಕ್ಕೆ ಇತರರೊಂದಿಗೆ ವಾದ ಮಾಡುವುದು ಅಥವಾ ಜಗಳವಾಡುವುದನ್ನು ತಪ್ಪಿಸಿ. ಇದರಿಂದ ನಿಮಗೆ ಹಲವು ಸಮಸ್ಯೆಗಳು ಕಾಡಬಹುದು. ರಾಜಕೀಯದಲ್ಲಿ ಇರುವವರು ಈ ವರ್ಷದಲ್ಲಿ ಗೆಲುವುಗಳನ್ನು ತಮ್ಮದಾಗಿಸಿಕೊಳ್ಳಬಹುದು.
ತುಲಾ ರಾಶಿ
ಮ್ಮ ಜೀವನದ ಮಹತ್ವದ ಘಟನೆಗಳಲ್ಲಿ ಕೆಲವು ಈ ವರ್ಷ ನಡೆಯಬಹುದು. ಆದರೂ ಹಲವು ಬಾರಿ ನಿರಾಶೆಗಳನ್ನು ಎದುರಿಸಬೇಕಾದೀತು. ನಿಮ್ಮ ಬೇಜವಾಬ್ದಾರಿ ಸ್ವಭಾವವೇ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾದೀತು. ಕುಟುಂಬ ಸದಸ್ಯರಿಂದ ಬೇರ್ಪಡುವ ನೋವನ್ನು ನೀವು ಸಹಿಸಿಕೊಳ್ಳಬೇಕಾದೀತು. ಮುಖ್ಯವಾದ ಕೆಲವು ಕೆಲಸಗಳ ಕಾರಣಕ್ಕೆ ನೀವು ಕುಟುಂಬದಿಂದ ದೂರ ನೆಲೆಸುವ ಸಂಭವ ಬಂದೀತು. ನಿಮ್ಮ ಅನುಪಸ್ಥಿತಿ ಕುಟುಂಬಕ್ಕೆ ದೊಡ್ಡ ಕೊರತೆಯಾದೀತು.
ವೃಶ್ಚಿಕ ರಾಶಿ
ಕೆಲವು ಸಂದರ್ಭದಲ್ಲಿ ನಿಮಗೆ ಹಣದ ದೊಡ್ಡ ಮೊತ್ತ ಕೈಗೆ ಬಂದರೂ ಹಣಕಾಸಿನ ವಿಷಯದಲ್ಲಿ ಈ ವರ್ಷ ಸಾಧಾರಣವಾಗಿರಲಿದೆ. ಈ ಬಾರಿ ಕೆಲವು ಹೊಸ ಸಂಬಂಧಗಳು ಹುಟ್ಟಿಕೊಂಡಾವು. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ನಿಮ್ಮ ಸಂತೋಷಕ್ಕೆ ಕಾರಣವಾಗಿರಬಹುದು. ಸಮಾಜ ಕಲ್ಯಾಣಕ್ಕೆ ಅಥವಾ ಇತರರಿಗೆ ನೆರವಾಗಲು ಅವರು ನಿಮ್ಮೊಂದಿಗೆ ಕೈಜೋಡಿಸಬಹುದು. ಅನಿರೀಕ್ಷಿತ ಮತ್ತು ಅನಗತ್ಯ ಪ್ರವಾಸಗಳಿಗೆ ನೀವು ಸಿದ್ಧರಾಗಿರಬೇಕಾದೀತು; ಅದು ನಿಮ್ಮ ಚಿಂತೆಯನ್ನು ಹೆಚ್ಚಿಸಿ, ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು.
ಧನುಸ್ಸು ರಾಶಿ
ನಿಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ಮಧ್ಯೆ ಸಮತೋಲನವನ್ನು ಕಾಯ್ದುಕೊಳ್ಳಿ. ಹೀಗೆ ಮಾಡದಿದ್ದರೆ ನೀವು ನಿರ್ಣಯ ತೆಗೆದುಕೊಳ್ಳುವ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಚುರುಕುತನ ನಿಮ್ಮ ಸ್ವಭಾವದಲ್ಲೇ ಇದ್ದು ಅದನ್ನು ಹೆಚ್ಚು ಬಳಸುವ ಅವಕಾಶಗಳು ನಿಮ್ಮದಾದೀತು. ಈ ವರ್ಷ ನಿಮ್ಮ ಹೆತ್ತವರ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ.
ಮಕರ ರಾಶಿ
ವ್ಯವಹಾರದ ವಿಷಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ವ್ಯವಹಾರವೂ ಅಭಿವೃದ್ಧಿ ಹೊಂದಲಿದೆ. ನಿಮ್ಮ ಚುರುಕುತನ ಮತ್ತು ಕಠಿಣ ಶ್ರಮ ಪಡುವ ಗುಣದಿಂದ ವೃತ್ತಿಯಲ್ಲಿ ಯಶಸ್ಸು ಪಡೆಯುವ ಅವಕಾಶ ಹೆಚ್ಚಿದೆ. ಆಸ್ತಿ ಸಂಬಂಧಿತ ವಿಷಯಗಳಲ್ಲಿ ನಿಮಗೆ ಲಾಭವಾಗಲಿದೆ; ಇದಕ್ಕಾಗಿ ನೀವು ಹೆಚ್ಚು ಶ್ರಮಪಡಬೇಕಾಗಿಲ್ಲ ಎಂಬುದು ವಿಶೇಷ. ನೀವು ಮನೆ ಖರೀದಿಸುವ ಬಯಕೆ ಈ ವರ್ಷ ನೆರವೇರುತ್ತದೆ. ನಿಮ್ಮ ಮಕ್ಕಳು ಅವರ ಬದುಕಿನಲ್ಲಿ ಪ್ರಗತಿ ಹೊಂದುತ್ತಾರೆ. ನೀವು ವಿದ್ಯಾರ್ಥಿಯಾಗಿದ್ದರೆ, ಕೆಲವು ಅಡೆತಡೆಗಳನ್ನು ಎದುರಿಸಬೇಕಾದೀತು.
ಕುಂಭ ರಾಶಿ
ನೀವು ಉದ್ಯಮಿ ಅಥವಾ ಉದ್ಯೋಗಿಯಾಗಿದ್ದರೆ, ಈ ವರ್ಷ ಯಶಸ್ಸಿನ ಹೊಸ ಮೆಟ್ಟಿಲನ್ನು ಹತ್ತಲಿದ್ದೀರಿ. ನೀವು ಹಳೆಯ ಹಲವು ಬಯಕೆಗಳನ್ನು ಹೊಂದಿರಬಹುದು, ಆದರೆ ತೃಪ್ತಿಯ ಭಾವನೆ ಸದಾ ನಿಮ್ಮೊಂದಿಗೆ ಇರುವುದರಿಂದ ನೀವು ಉತ್ತಮ ವ್ಯಕ್ತಿಯಾಗುತ್ತೀರಿ. ಹಣದ ಹಿಂದೆ ಓಡುವ ವ್ಯಕ್ತಿ ನೀವಲ್ಲ, ಕೌಟುಂಬಿಕ ವಿಷಯಗಳಿಗೆ ಮಹತ್ವ ಕೊಡುವ ಉತ್ತಮ ಗುಣ ನಿಮ್ಮಲಿದೆ. ಬಡವರಿಗೆ ಸಹಾಯ ಮಾಡುವ ಮತ್ತು ಸಮಾಜ ಕಲ್ಯಾಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಕಾರಣದಿಂದ ನೀವು ಹೆಚ್ಚು ಮಾನಸಿಕ ಶಾಂತಿಯನ್ನು ಪಡೆಯಲಿದ್ದೀರಿ.
ಮೀನ ರಾಶಿ
ದೇವರ ಮೇಲಿನ ನಿಮ್ಮ ನಂಬಿಕೆ ಹೆಚ್ಚಾಗಬಹುದು. ಇತರರಿಗೆ ಸಹಾಯ ಮಾಡುವುದರಿಂದಲೇ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ. ಇದರಿಂದ ನೀವು ಗೌರವ ಪಡೆಯುವುದು ಮಾತ್ರವಲ್ಲ. ಜನಪ್ರಿಯತೆಯನ್ನೂ ಗಳಿಸುತ್ತೀರಿ. ಆದರೆ ಇವೆಲ್ಲವೂ ನಿಮ್ಮಲ್ಲಿ ಅಹಂಕಾರ ತುಂಬದಂತೆ ನೋಡಿಕೊಳ್ಳಿ. ಆದಾಯದ ದೃಷ್ಟಿಯಿಂದ ಈ ವರ್ಷ ನಿಮಗೆ ಅದ್ಭುತವಾಗಿರಲಿದೆ. ನಿಮ್ಮ ಧೈರ್ಯ ಮತ್ತು ಮುಂದುವರಿಯುವ ಸಾಮರ್ಥ್ಯವು ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.