ಸ್ಯಾಂಡಲ್ವುಡ್ನ ಯಂಗ್ ವಿಲನ್ ಕೊರತೆಯ ಜಾಗವನ್ನ ತುಂಬಿದ ಡಾಲಿ ಧನಂಜಯ್. ಕನ್ನಡ ಚಿತ್ರರಂಗಕ್ಕೆ ಸಿಕ್ಕ ಸ್ಪೆಷಲ್ ಹೀರೋ. ಟಗರು ಸಿನಿಮಾದ ಮೂಲಕ ಮತ್ತಷ್ಟು ಫೇಮಸ್ ಆದ ಹ್ಯಾಂಡ್ಸಮ್ ವಿಲನ್.
ಡಾಲಿ ತಮಗೆ ಸಿಕ್ಕ ಪಾತ್ರಗಳ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ತನ್ನ ಹೆಸರನ್ನ ಅಚ್ಚಿಳಿಸಿದ ಹೀರೋ, ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಾಲಿ, ಈಗ ಡಾನ್ ಜಯರಾಜ್ ಆಗಿ ರೌಡಿಗಳ ಅಡಕ್ಕೆ ಕಾಲಿಡಲಿದ್ದಾರೆ.
ಇದನ್ನೂ ಓದಿ : ಗಣೇಶ ಹಬ್ಬಕ್ಕೆ ಬರಲಿದ್ಯಾ ಹೊಸಾ ಕರೆನ್ಸಿ..? ಹೊಸ ನೋಟು ಬಂದರೆ ಹಳೇ ನೋಟುಗಳ ಕಥೆ ಏನು..?
ಈಗಾಗಲೇ ಸಲಗ, ಯುವರತ್ನ ಸಿನಿಮಾ ರಿಲೀಸ್ಗೆ ಸಿದ್ಧವಾಗಿದ್ದು, ಬಡವ ಱಸ್ಕಲ್ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿ ಇದೆ. ಇನ್ನು ಡಾಲಿ ಇತ್ತೀಚೆಗಷ್ಟೆ ರತ್ನನ್ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಇದೆಲ್ಲದರ ನಡುವೆ ಧನಂಜಯ್ ಅಭಿಮಾನಿಗಳು ಕಾಯುತ್ತಿರುವ ಮೋಸ್ಟ್ ಅವೈಟೆಡ್ ಸಿನಿಮಾ ಅಂದ್ರೆ ಅದು ಡಾನ್ ಜಯರಾಜ್ ಸಿನಿಮಾ. ಇದೀಗ ಈ ಚಿತ್ರದ ಟೈಟಲ್ ಫೋಸ್ಟರ್ ರಿಲೀಸ್ ಆಗಿದ್ದು. ಹೆಡ್ ಬುಷ್ ಅನ್ನೋ ಈ ಟೈಟಲ್ ನಿಂದ ಡಾಲಿ ಪಾತ್ರ ಹೇಗಿರಬಹುದು ಅನ್ನೋ ನಿರಿಕ್ಷೆಗಳು ಅಭಿಮಾನಿಗಳನ್ನು ಮತ್ತಷ್ಟು ಕುತೂಹಲಕ್ಕೀಡು ಮಾಡಿಕೊಟ್ಟಿದೆ.
ಇದನ್ನೂ ಓದಿ : ಎಸ್ಪಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ! ಚೇತರಿಕೆ ಕಂಡ ಸಂಗೀತ ಬ್ರಹ್ಮ ಎಸ್ ಪಿ ಬಾಲಸುಬ್ರಹ್ಮಣ್ಯಂ !
ಸಾಮಾನ್ಯವಾಗಿ ಹೆಡ್ ಬುಷ್ ಅಂದಾಗ ನಮಗೆ ನೆನಪಾಗೋದೆ, ಎರಡು ಮುಖದ ನಾಣ್ಯ. ಅದೇ ರೀತಿ ಡಾಲಿ ಈ ಚಿತ್ರದಲ್ಲಿ 2 ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳಬಹುದು. ಆರು ಭಾಷೆಯಲ್ಲಿ ಧನಂಜಯ್ನ ಡಾನ್ ಜಯರಾಜ್ ಆಗಿ ಸದ್ದು ಮಾಡಲಿದ್ದು, ನವ ನಿರ್ದೇಶಕ ಶೂನ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ಇದನ್ನೂ ಓದಿ : ಇಷ್ಟು ದಿನಗಳ ಬಳಿಕ ಚಿರು ಸರ್ಜಾ ಬಗ್ಗೆ ಅರ್ಜುನ್ ಸರ್ಜಾ ಹೀಗ್ಯಾಕೆ ಹೇಳಿದ್ರು ? ಚಿರು ಸರ್ಜಾ ಮಾವನಿಗೆ ಬಾಕಿ ಉಳಿಸಿಕೊಂಡಿದ್ದೇನು ?
ಧನಂಜಯ್ ಡಾನ್ ಜಯರಾಜ್ ಆಗಿ ಭೂಗತ ಲೋಕದಲ್ಲಿ ಹೆಡ್ ಬುಷ್ ಆಟವನ್ನ ಹೇಗೆ ಆಡ್ತಾರೆ ಅನ್ನೋದನ್ನ ನೋಡೋಕೆ ಫ್ಯಾನ್ಸ್ಗಳು ಸಖತ್ ಕ್ಯೂರಿಯಾಸಿಟಿಯಿಂದ ಕಾಯ್ತಿದ್ದಾರೆ.