ಚಿಕ್ಕಮಗಳೂರು: ಕನ್ನಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಕ್ಕೆ ಬಿಜೆಪಿ ತುಕ್ಡೆ ಗ್ಯಾಂಗ್ಗಳನ್ನೆಲ್ಲಾ ಕಾಂಗ್ರೆಸ್ ಸೇರಿಸಿಕೊಳ್ತಿದೆ ಎಂದು ಟೀಕಿಸಿತ್ತು. ಈ ಟೀಕೆಗೆ ಉತ್ತರಿಸುವ ವೇಳೆ ಕನ್ನಯ್ಯ ನಾವೇ ಬಿಜೆಪಿ ತುಕ್ಡೆ ಮಾಡತೀವಿ ಎಂದಿದ್ದರು. ಇದೀಗ ಬಿಜೆಪಿ ತುಕ್ಡೆ-ತುಕ್ಡೆ ಮಾಡ್ತೀವಿ ಎಂದಿದ್ದ ಕನ್ನಯ್ಯಗೆ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, ಇವರ ತಾತ-ಮುತ್ತಾತರು ಈ ರೀತಿ ಹೇಳಿ ಕಳೆದು ಹೋಗಿದ್ದಾರೆ, ಅವರ ಸಮಾಧಿ ಮಣ್ಣಿನ ಮೇಲೆ ಸಂಘ, ಬಿಜೆಪಿ ಬಲವಾಗಿದೆ. ಕನ್ನಯ್ಯ ಕುಮಾರ್ ತುಕ್ಡೆ ಗ್ಯಾಂಗಿನ ನಾಯಕ, ಅದೇನೋ ಹೇಳ್ತಾರಲ್ಲ ಹಿಟ್ಟು ಹಳಸಿತ್ತು..ಇನ್ನೇನೋ ಕಾದಿತ್ತು ಅಂತಾ. ಈಗ ಅದೇ ಪರಿಸ್ಥಿತಿ ಕಾಂಗ್ರೆಸ್ಸಿನದ್ದಾಗಿದೆ, ಆಂತರಿಕ ಪ್ರಜಾಪ್ರಭುತ್ವ ಇಲ್ಲದ ಪಕ್ಷ ದೇಶಕ್ಕೇನು ಪ್ರಜಾಪ್ರಭುತ್ವ ದ ಪಾಠ ಹೇಳುತ್ತೇ, ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಲ್ಲಿದೆ. ಅಲ್ಲಿರೋದು ವಂಶ ಪಾರಂಪರ್ಯ, ಪರಿವಾರವಾದ. ಪರಿವಾರವಾದ ಬಂದ್ರೆ ಅಲ್ಲಿ ಮಾಲಿಕತ್ವ ಬರುತ್ತೆ, ಅಲ್ಲಿ ಮಾಲೀಕರು-ನೌಕರರು, ಮಾಲೀಕರು-ಗುಲಾಮರು ಇರುತ್ತಾರೆ. ತುಕ್ಡೆ ಗ್ಯಾಂಗಿನ ನಾಯಕರಿಗೆ ಗತಿ ಇರಲಿಲ್ಲ, ಚುನಾವಣೆಯಲ್ಲಿ ಸೋತರು ಇಂತವರು ಬಹಳ ಮಾತನಾಡಿ ಮಾತನಾಡಿ ಮಣ್ಣಾಗಿದ್ದಾರೆ ಎಂದು ಸಿ.ಟಿ.ರವಿ ಗುಡುಗಿದ್ದಾರೆ.
ಇದನ್ನೂ ಓದಿ:ಪತ್ನಿಗಾಗಿ ಸೀರೆ ಖರೀದಿಸಿದ ಬೊಮ್ಮಾಯಿ..! ಮೂರು ಸೀರೆ ನೋಡಿ, ಒಂದು ಸೆಲೆಕ್ಟ್ ಮಾಡಿದ ಸಿಎಂ..!