ಬೆಂಗಳೂರು: ಮಾಫಿಯಾ ವ್ಯವಸ್ಥೆಯನ್ನು ರಾಜಕೀಯದಲ್ಲಿ ಬೆಳೆಸಿದ್ದ ಕಾಂಗ್ರೆಸ್, ಆ ಮಾಫಿಯಾದಿಂದ ಹೊರತರುವ ಕುರಿತು ಚಿಂತನೆ ನಡೆಸಬೇಕಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.
ಇದನ್ನೂ ಓದಿ: PSI ಅಕ್ರಮ ಕೇಸ್ನಲ್ಲಿ ಆರೋಪಿ ವೈಜನಾಥ್ ಜೈಲಿಗೆ..! ಹೆಂಡ್ತಿ ಜೈಲರ್ ಆಗಿರೋ ಸೆಂಟ್ರಲ್ ಜೈಲಿಗೆ ಶಿಫ್ಟ್..!
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿಯಮ ಜಾರಿಗೆ ತಂದಿರುವ ಕುರಿತು ಪ್ರತಿಕ್ರಿಯಿಸಿದ ಸಿ.ಟಿ. ರವಿ ಅವರು ಕನ್ನಡದಲ್ಲಿ ಗಾದೆಯೊಂದಿದೆ ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು ಎಂಬಂತೆ ಕಾಂಗ್ರೆಸ್ ವರ್ತಿಸುತ್ತಿದೆ. ಈ ನಿಯಮ ಕಾಂಗ್ರೆಸ್ ನ ನಂಬರ್ ಒನ್ ಕುಟುಂಬಕ್ಕೂ ಅನ್ವಯವಾಗುತ್ತೆ ಅನಿಸುತ್ತಿದೆ.
ಚಿಂತನಾ ಶಿಬಿರದ ಚರ್ಚೆಯನ್ನು ಗಮನಿಸಿದಾಗ ಅಲ್ಲಿ ಚಿಂತನೆ ನಡೆದಿರುವುದು ಕಡಿಮೆ, ಅಲ್ಲಿ ಚಿಂತೆ ಜಾಸ್ತಿಯಾಗಿದೆ. ಅವರಿಗೆ ಸೋಲಿನ ಚಿಂತೆ ಕಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಚುನಾವಣೆ ನಡೆಸದೆ ಒಂದು ಕುಟುಂಬದವರೇ ಅಧ್ಯಕ್ಷರಾಗುತ್ತಿದ್ದಾರೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಉಳಿಯಲಿ ಪ್ರಜಾಪ್ರಭುತ್ವ ಗಟ್ಟಿಯಾಗಲಿ ಎಂದು ಸಿ.ಟಿ. ರವಿ ತಿಳಿಸಿದರು.