ಭಾರತದಲ್ಲಿ ಎರಡು ಕೋವಿಡ್ ಲಸಿಕೆಗಳಿಗೆ ಅನುಮತಿ ದೊರೆಯುತ್ತಿದ್ದಂತೆ ವಿಶ್ವದಾದ್ಯಂತ ಎಲ್ಲರ ದೃಷ್ಟಿ ಭಾರತದ ಲಸಿಕೆಗಳ ಮೇಲೆ ನೆಟ್ಟಿದೆ. ಇದ್ದಕ್ಕೆ ಪೂರಕವೆಂಬಂತೆ ಹಲವಾರು ದೇಶಗಳು ಭಾರತದ ಜೊತೆ ಲಸಿಕೆಗಾಗಿ ಒಪ್ಪಂದ ಮಾಡಿಕೊಳ್ತಿದೆ.
ಇದೀಗ ಭಾರತ್ ಬಯೋಟೆಕ್ ಬ್ರೆಝಿಲ್ ನ Precisa Medicamentos ಸಂಸ್ಥೆಯ ಜೊತೆ ಕೊರೋನಾ ಲಸಿಕೆ ಕೋವಾಕ್ಸಿನ್ ಪೂರೈಸುವ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ಘೋಷಿಸಿದೆ. ಈ ಮೂಲಕ ಬ್ರೆಝಿಲ್ ಜನತೆಗೂ ಗೂ ಭಾರತದ ಕೋವಾಕ್ಸಿನ್ ಲಸಿಕೆ ಸಿಗುವುದು ನಿಚ್ಚಳವಾಗಿದೆ. ಇದರಿಂದ ಕೊರೋನಾ ಲಸಿಕೆ ಪೂರೈಕೆಯಲ್ಲಿ ಭಾರತ ಬಾಪುಗಾಲು ಇಟ್ಟಂತಾಗಿದೆ.