ಕಿತ್ತೂರು: ಕಳೆದ ಎರಡು ದಿನಗಳ ಹಿಂದೆ ಶಾಸಕ ಮಹಾಂತೇಶ ದೊಡಗೌಡರ ಜನ್ಮದಿನದಂದು ಪೊಲೀಸ್ ಅಧಿಕಾರಿಗಳು ಮಹಾಂತೇಶ ದೊಡಗೌಡರ ದಂಪತಿಗೆ ಪುಷ್ಪವೃಷ್ಟಿ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಪುಷ್ಪವೃಷ್ಟಿ ಮಾಡಿದ ಪೊಲೀಸರಿಗೆ ಇಲಾಖೆಯಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಹಾಗೂ ಅವರ ಪತ್ನಿಯ ಮೇಲೆ ಪೊಲೀಸರು ಪುಷ್ಪವೃಷ್ಟಿ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು. ಹೀಗಾಗಿ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಬೈಲಹೊಂಗಲ ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಠಾಣೆ ಪಿಎಸ್ಐ ವೈ.ಎಸ್.ಶೀಗಿಹಳ್ಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ:SMN ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ನ ವಂಚಕರು ಅಂದರ್..!