ಬೆಂಗಳೂರು : ದೇಶಾದ್ಯಂತ 57 ರಾಜ್ಯಸಭಾ ಸ್ಥಾನಗಳಿಗೆ ಎಲೆಕ್ಷನ್ ಘೋಷಣೆಯಾಗಿದ್ದು, ಕರ್ನಾಟಕದ 4 ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ.
ಮೇ 24ರಿಂದ 31ರೊಳಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಕರ್ನಾಟಕದ 4 ಸ್ಥಾನಗಳಿಗೆ ಜೂನ್ 10ರಂದೇ ಮತದಾನ ಅಂದೇ ಫಲಿತಾಂಶ ಪ್ರಕಟವಾಗುತ್ತದೆ. 57 ಮಂದಿ ಅವಧಿಯು ಜೂನ್ 30ರಂದು ಮುಕ್ತಾಯ ಗೊಳ್ಳಲಿದೆ. ರಾಜ್ಯಸಭಾ ಸದಸ್ಯರಾದ ಕೆ.ಸಿ ರಾಮಮೂರ್ತಿ, ಜಯರಾಮ್ ರಮೇಶ್, ಆಸ್ಕರ್ ಪೊರ್ನಾಂಡಿಸ್ ಹಾಗೂ ನಿರ್ಮಲಾ ಸೀತಾರಾಮನ್ ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯವಾಗಲಿದೆ.