ಮೈಸೂರು : ಜೆಡಿಎಸ್ ಪಂಚರತ್ನ ರಥಯಾತ್ರೆ ಸಮಾವೇಶಕ್ಕೆ ಕ್ಷಣಗಣನೆಯಿದ್ದು, ಮುಳಬಾಗಿಲಿನಲ್ಲಿ ಕೆಲ ಹೊತ್ತಿನಲ್ಲೇ ಬೃಹತ್ ಸಮಾವೇಶ ಆರಂಭವಾಗಲಿದೆ.
ಮುಳಬಾಗಿಲು ಬೈಪಾಸ್ ರಸ್ತೆಯಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದೆ. ಪಂಚರತ್ನ ರಥಯಾತ್ರೆ ಸಮಾವೇಶ ಸುಮಾರು 50 ಎಕರೆ ಜಾಗದಲ್ಲಿ ನಡೆಯುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಭಾಗದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸುವ ಸಾಧ್ಯತೆಯಿದೆ.
ಸಮಾವೇಶ ವೀಕ್ಷಣೆಗೆ 10 ಬೃಹತ್ LED ಸ್ಕ್ರೀನ್ ಅಳವಡಿಸಿದ್ದಾರೆ. 120 ಊಟದ ಕೌಂಟರ್ ಸ್ಥಾಪಿಸಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಹೆಚ್ಡಿಕೆ, ನಿಖಿಲ್ ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಶಾಸಕರೂ ಸೇರಿ ಎಂಎಲ್ಸಿಗಳು ಭಾಗಿಯಾಗಲಿದ್ದಾರೆ.