ಬೆಂಗಳೂರು: ಡಿಸೆಂಬರ್ 10ರಂದು ನಡೆಯುವ ಪರಿಷತ್ ಎಲೆಕ್ಷನ್ನಲ್ಲಿ 7 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಬಿಜೆಪಿಯಿಂದ ಟಿಕೆಟ್ ವಂಚಿತರಾಗಿದ್ದ ಮೈಸೂರಿನ ಸಂದೇಶ್ ನಾಗರಾಜ್ ಮತ್ತೆ ಜೆಡಿಎಸ್ನಿಂದ ಕಣಕ್ಕಿಳಿಯೋ ಕಸರತ್ತು ಮಾಡಿದ್ದರು. ನಿನ್ನೆಯಷ್ಟೇ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಬಂದಿದ್ದ ಸಿ.ಎನ್.ಮಂಜೇಗೌಡಗೆ ಟಿಕೆಟ್ ಸಿಕ್ಕಿದೆ. ಮಂಡ್ಯದಿಂದ ಅಪ್ಪಾಜಿಗೌಡ, ತುಮಕೂರಿನಿಂದ ಅನಿಲ್ ಕುಮಾರ್, ಕೋಲಾರದಿಂದ ವಕ್ಕಲೇರಿ ರಾಮು, ಕೊಡಗು ಕ್ಷೇತ್ರದಿಂದ ಹೆಚ್.ಯು.ಇಸಾಕ್ ಖಾನ್, ಹಾಸನದಿಂದ ಸೂರಜ್ ರೇವಣ್ಣ ಇವತ್ತು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಇದನ್ನೂ ಓದಿ:40% ಕಮಿಷನ್ ವಿಚಾರವಾಗಿ ಪ್ರಧಾನಿಯವರು ಮೌನವಾಗಿರುವುದೇಕೆ?… ಪ್ರಧಾನಿ ಮೋದಿಗೆ ಡಿಕೆಶಿ ಪ್ರಶ್ನೆ…