ಬೆಂಗಳೂರು: ವಿಧಾನ ಪರಿಷತ್ನ ಚುನಾವಣೆಯ ಮತದಾನ ಡಿಸೆಂಬರ್ 10 ರ ಶುಕ್ರವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬೀಳಲಿದ್ದು ಇಂದು ಸಂಜೆಯಿಂದಲೇ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ಬೆಂಗಳೂರು ಡಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರ ಕ್ಷೇತ್ರದಲ್ಲಿ 83 ಗ್ರಾಮ ಪಂಚಾಯತ್ತಿಗಳಿದ್ದು, ಆಯಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಮದ್ಯದ ಮೇಲೆ ನಿರ್ಬಂಧವನ್ನು ಮಾಡಲಾಗಿದೆ. ಆನೇಕಲ್, ಅತ್ತಿಬೆಲೆ, ಬೊಮ್ಮಸಂದ್ರ ಪುರಸಭೆಗಳಿಗೆ ಅನ್ವಯವಾಗುತ್ತದೆ. ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರೂ ಸಹ 9 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.