ಬೆಂಗಳೂರು: ರಾಜ್ಯದಲ್ಲಿ ಇಂದೂ ಕೊರೋನಾ ಸೋಂಕಿನ ಅಬ್ಬರ ಮುಂದುವರೆದಿದ್ದು, ಇಂದು ಒಂದೇ ದಿನ 28,723 ಸಾವಿರ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಹದಿನಾಲ್ಕು ಜನರು ಕೊರೋನಾಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಆರ್ಭಟ ತೀವ್ರವಾಗಿದ್ದು, ಇಂದು 20,121 ಕೇಸ್ ಗಳು ಪತ್ತೆಯಾಗಿವೆ. ಇಂದು ರಾಜ್ಯದಲ್ಲಿ ಒಟ್ಟು 2,21,205 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ 12.98 % ಇದೆ. ಇನ್ನು ರಾಜ್ಯದಲ್ಲಿ ಇಂದು 3105 ಜನರು ಡಿಸ್ಚಾರ್ಜ್ ಆಗಿದ್ದರೆ ಆಕ್ಟೀವ್ ಕೇಸ್ ಗಳ ಸಂಖ್ಯೆ 1,41,337 ಕ್ಕೆ ಏರಿಕೆಯಾಗಿದೆ. ಬೆಂಗಳೂರು ಒಂದರಲ್ಲೇ 1 ಲಕ್ಷಕ್ಕೂ ಹೆಚ್ಚಿನ ಆಕ್ಟೀವ್ ಕೇಸ್ ಗಳಿವೆ. ಇನ್ನು ಬೆಂಗಳೂರಿನಲ್ಲಿ ಇಂದು 7 ಜನರು ಕೊರೋನಾಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
Highest testing since the beginning of pandemic with 2.21 lakh tests today.
◾New cases in State:28,723
◾New cases in B'lore: 20,121
◾Positivity rate in State: 12.98%
◾Discharges: 3,105
◾Active cases State: 1,41,337 (B'lore- 101k)
◾Deaths:14 (B'lore- 07)
◾Tests: 2,21,205— Dr Sudhakar K (@mla_sudhakar) January 14, 2022