ಬೆಂಗಳೂರು: ನಾಡಿನಾದ್ಯಂತ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದು, ಕೋವಿಡ್ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ನಡುವೆ ಎಲ್ಲೆಡೆ ಹಬ್ಬ ಆಚರಣೆ ಮಾಡಲಾಗುತ್ತಿದೆ.
ವರ್ಷದ ಮೊದಲ ಹಬ್ಬ ಸಂಕ್ರಾಂತಿಯಲ್ಲಿ ಮನೆ-ಮನೆಯಲ್ಲೂ ಸಿಂಗಾರ ಮಾಡಿ, ಎಳ್ಳು, ಬೆಲ್ಲ ಬೀರಿ ಸಹೋದರತ್ವದ ಸಾರ ಮೆರೆಯುತ್ತಾರೆ. ಅಷ್ಟೇ ಅಲ್ಲ ನಾಡಿನ ದೇಗುಲದಲ್ಲೂ ಹಬ್ಬದ ಕಳೆ ಮನೆ ಮಾಡಿದೆ. ಇಂದು ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯಲಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ಸರಳ ಪೂಜೆ-ಪುನಸ್ಕಾರ ನೆರವೇರಿಸುತ್ತಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಭಾರೀ ಅಗ್ನಿ ಆಕಸ್ಮಿಕ…! ಮುಂಜಾನೆ ಧಗಧಗನೆ ಹೊತ್ತಿ ಉರಿದ ಸೌಥ್ ಇಂಡಿಯನ್ ಮಾಲ್…!