ಬೆಂಗಳೂರು: ರಾಜ್ಯದಲ್ಲಿ ಕೊರೋನಾರ್ಭಟ ಮುಂದುವರೆದಿದ್ದು, ನೆನ್ನೆ ಒಂದೇ ದಿನ 48,905 ಕೊರೋನಾ ಕೇಸ್ ದೃಢ ಪಟ್ಟಿದೆ. ಕಳೆದ 24 ಗಂಟೆಯಲ್ಲಿ 39 ಮಂದಿ ವೈರಸ್ಗೆ ಬಲಿಯಾಗಿದ್ದು, ಸತತ 9ನೇ ದಿನ 40 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ 22,427 ಹೊಸ ಕೇಸ್ ಪತ್ತೆಯಾಗಿದ್ದು, ಸೋಂಕಿಗೆ 8 ಮಂದಿ ಬಲಿಯಾಗಿದ್ದಾರೆ. ಜಿಲ್ಲೆಗಳಲ್ಲೂ ಕೊರೋನಾ ಸೋಂಕು ಅಬ್ಬರಿಸುತ್ತಿದ್ದು, ಮೈಸೂರು 2797, ತುಮಕೂರು 2645 ಮಂದಿಗೆ ಸೋಂಕು, ಮಂಡ್ಯದಲ್ಲಿ 2186 , ಹಾಸನದಲ್ಲಿ 2016 ಮಂದಿಗೆ ಅಟ್ಯಾಕ್ ಆಗಿದೆ. ಧಾರವಾಡ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಸೋಂಕು ದ್ವಿಗುಣ ಗೊಂಡಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 22.51ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3.57 ಲಕ್ಷಕ್ಕೆ ಏರಿಕೆಯಾಗಿದೆ.