ಚೀನಾ : ಚೀನಾದಲ್ಲಿ ಕೊರೋನಾ ಕಂಟ್ರೋಲ್ ತಪ್ಪಿದ್ದು, ಒಂದೇ ದಿನ 40 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದೆ.
ಸತತ ಒಂದು ವಾರದಿಂದ ಡಬಲ್ ಡಿಜಿಟ್ನಿಂದ ಇಳಿಯುತ್ತಿಲ್ಲ , ಕೊರೋನಾ ಪಾಸಿಟಿವ್ ಕೇಸ್ ಹೆಚ್ಚಳದಿಂದ ಆತಂಕ ಉಂಟಾಗಿದೆ.
ಚೀನಾದಲ್ಲಿ ನಿನ್ನೆ ಒಂದೇ ದಿನ 40,457 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಚೀನಾದಲ್ಲಿ ಈವರೆಗೆ ಡೆಡ್ಲಿ ಕೊರೋನಾ ಆಟಕ್ಕೆ 5600 ಡೆತ್ ಆಗಿದ್ದಾರೆ. ಚೀನಾದಲ್ಲಿ 24 ಗಂಟೆಗಳಲ್ಲಿ 39 ಸಾವಿರ ಕೇಸ್ ದಾಖಲಾಗಿದೆ. ಇದೀಗ ಕೊರೋನಾ ಮೀಟರ್ ಒಂದು ದಿನದ ದಾಖಲೆ ಮೀರಿ ಹೋಗುತ್ತಿದೆ. ನವೆಂಬರ್ 24ರ ನಂತರ ಬರೋಬ್ಬರಿ 1.50 ಲಕ್ಷ ಮಂದಿಗೆ ಪಾಸಿಟಿವ್ ಕೇಸ್ ಕಂಡು ಬಂದಿದೆ.
ಚೀನಾ ಅಧ್ಯಕ್ಷ ತಂದಿರೋ ಶೂನ್ಯ ಕೋವಿಡ್ ನೀತಿಗೆ ಆಕ್ರೋಶ ವ್ಯಕ್ತವಾಗಿದೆ. ಚೀನಾದ ಜನರು ಸರ್ಕಾರದ ನೀತಿ ಖಂಡಿಸಿ ಬೀದಿಗೆ ಇಳಿಯುತ್ತಿದ್ದಾರೆ. ಶಾಂಘೈ, ಬೀಜಿಂಗ್ ಸೇರಿದಂತೆ ಚೀನಾದ ಬಹುತೇಕ ಕಡೆ ಪ್ರೊಟೆಸ್ಟ್ ನಡೆಯುತ್ತಿದ್ದು ಸುದೀರ್ಘ ಲಾಕ್ಡೌನ್, ಸೀಲ್ ಡೌನ್ ಖಂಡಿಸಿ ರೋಡಿಗಿಳಿದು ಪ್ರೊಟೆಸ್ಟ್ ಮಾಡಿದ್ದಾರೆ. ಈ ಹಿನ್ನೆಲೆ ಚೀನಾ ಸರ್ಕಾರಶೇ.60ರಷ್ಟು ಬಿಗಿ ಕ್ರಮಗಳನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ : ರಾಜ್ಯ ರಾಜಕಾರಣದ ಬಗ್ಗೆ ನಡ್ಡಾ ಜೊತೆ ಚರ್ಚೆ ಮಾಡಲಿರುವ ಸಿಎಂ..! ದೆಹಲಿ ಭೇಟಿ ವೇಳೆ ಸಂಪುಟ ವಿಚಾರ ಚರ್ಚೆ ಆಗುತ್ತಾ..?