ಬೆಂಗಳೂರು: ಮೊದಲ ಅಲೆ.. ಎರಡನೇ ಅಲೆ… ಡೆತ್ ಆಡಿಟ್ ವರದಿ ಬಿಡುಗಡೆ ಮಾಡಲು ಪಾಲಿಕೆ ಸಿದ್ದತೆ ಮಾಡಿಕೊಂಡಿದ್ದು, ಮುಂದಿನ ವಾರ ಆರೋಗ್ಯ ಸಚಿವರ ಸಮ್ಮುಖದಲ್ಲಿ ಕೊರೊನಾ ಡೆತ್ ಆಡಿಟ್ ವರದಿ ಬಿಡುಗಡೆ ಮಾಡಲಿದೆ.
ಕೊರೊನಾ ಮೊದಲನೆ ಅಲೆ…!
ಮೊದಲ, ಎರಡನೇ ಅಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 16,307 ಆಗಿದ್ದು, ಈ ಪೈಕಿ ಮೊದಲ ಅಲೆಯಲ್ಲಿ 4,480 ಜನ ಸಾವನಪ್ಪಿದ್ದಾರೆ. ಎರಡನೇ ಅಲೆಯಲ್ಲಿ 11,827 ಮಂದಿ ಮೃತ ಪಟ್ಟಿದ್ದಾರೆ. ಮೊದಲ ಅಲೆಯಲ್ಲಿ 70 ವರ್ಷ ಮೇಲ್ಪಟ್ಟವರೇ ಹೆಚ್ಚು ಕೊರೊನಾಗೆ ಬಲಿಯಾಗಿದ್ದು, 70 ವರ್ಷಕ್ಕಿಂತ ಮೇಲ್ಪಟ್ಟ 1,459 ಮಂದಿ ಮೊದಲ ಅಲೆಯಲ್ಲಿ ಸಾವನಪ್ಪಿದ್ದಾರೆ. ಈ ಪೈಕಿ 439 ಮಹಿಳೆಯರು ಹಾಗೂ 1020 ಮಂದಿ ಪುರುಷರಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಹೇಳಿದ್ದಾರೆ.
ಮೊದಲ ಅಲೆಯಲ್ಲಿ ಸಾವನ್ನಪ್ಪಿದವರ ವಿವರ ಹೀಗಿದೆ.!
ಪುರುಷರು : 3,048,
ಮಹಿಳೆಯರು : 1,431
ತೃತೀಯ ಲಿಂಗಿಗಳು : 01
ಒಟ್ಟು : 4,480
ಮೊದಲ ಅಲೆಯಲ್ಲಿ ಸಾವನ್ನಪ್ಪಿದವರ ವಯಸ್ಸಿಗನುಸಾರ ವಿವರ ಹೀಗಿದೆ…!
00 – 09 : 10
10 – 19 : 16
20 – 29 : 87
30 – 39 : 217
40 – 49 : 499
50 – 59 : 976
60 – 69 : 1,216
00 -70+: 1,459
ಕೊರೊನಾ ಎರಡನೇ ಅಲೆ….!
ಎರಡನೇ ಅಲೆಯಲ್ಲೂ 70 ವರ್ಷ ಮೇಲ್ಪಟ್ಟವರೇ ಹೆಚ್ಚು ಕೊರೊನಾಗೆ ಬಲಿಯಾಗಿದ್ದು, 70 ವರ್ಷಕ್ಕಿಂತ ಮೇಲ್ಪಟ್ಟ 3,994 ಮಂದಿ ಎರಡನೇ ಅಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಈ ಪೈಕಿ 1,458 ಮಹಿಳೆಯರು ಹಾಗೂ 2,536 ಮಂದಿ ಪುರುಷರು ಕೊರೊನಾಗೆ ಬಲಿಯಾಗಿದ್ದಾರೆ.
ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರ ವಿವರ.!
ಪುರುಷರು : 7,271
ಮಹಿಳೆಯರು : 4,553
ತೃತೀಯ ಲಿಂಗಿಗಳು : 03
ಒಟ್ಟು : 11,827
ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರ ವಯಸ್ಸಿಗನುಸಾರ ವಿವರ ಹೀಗಿದೆ..!
00 – 09 : 11
10 – 19 : 12
20 – 29 : 198
30 – 39 : 736
40 – 49 : 1,547
50 – 59 : 2,380
60 – 69 : 2,949
00 -70+ : 3,994
ಇದನ್ನೂ ಓದಿ:12 ವರ್ಷಗಳ ಬಳಿಕ ‘ಕೈ‘ ಸೇರಲು ಸದಸ್ಯತ್ವ ಅಭಿಯಾನ.. ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ..